Sunday 29 August 2021

ಯಕ್ಷ ಸಾಹಿತ್ಯ ಸಾಂಗತ್ಯ-01 - ನೇರಪ್ರಸಾರ (Live Telecast)

ನೇರಪ್ರಸಾರ



ಯಕ್ಷವಾಹಿನಿ (ರಿ), ಬೆಂಗಳೂರು

ಯಕ್ಷ ಸಾಹಿತ್ಯ ಸಾಂಗತ್ಯ-01

(ನಾಡಿನ ಖ್ಯಾತ ಕವಿಗಳು, ಚಿಂತಕರು, ವಿದ್ವಾಂಸರಿಂದ ಯಕ್ಷ ಪ್ರಸಂಗಗಳ ಸಾಹಿತ್ಯ ಅವಲೋಕನದ ಸರಣಿ ಕಾರ್ಯಕ್ರಮ)

ದಿನಾಂಕ: 29-ಆಗಸ್ಟ್-2021, ಭಾನುವಾರ ಸಂಜೆ 6 ರಿಂದ

ಖ್ಯಾತ ಕವಿ, ನಾಟಕಕಾರ ಶ್ರೀ ಎಚ್ ಡುಂಡಿರಾಜ್ ಅವರಿಂದ ಹಟ್ಟಿಯಂಗಡಿ ರಾಮಭಟ್ಟ ವಿರಚಿತ ʻಸುಭದ್ರಾ ಕಲ್ಯಾಣʼ ಪ್ರಸಂಗ ಅವಲೋಕನ

ಮುಖ್ಯ ಅತಿಥಿಗಳು: ಶ್ರೀ ರವೀಂದ್ರ ಭಟ್, ಕಾರ್ಯನಿರ್ವಾಹಕ ಸಂಪಾದಕರು, ಪ್ರಜಾವಾಣಿ

ಸಮನ್ವಯ: ಡಾ. ಸಿ. ಆನಂದರಾಮ ಉಪಾಧ್ಯ, ಯಕ್ಷಗಾನ ವಿದ್ವಾಂಸರು

ತಾಂತ್ರಿಕ ನಿರ್ವಹಣೆ: ಶ್ರೀ ಲನಾ ಭಟ್

ಸಲಹೆ ಸಹಕಾರ: ಪ್ರೊ. ಎಮ್. ಎಲ್. ಸಾಮಗ, ಶ್ರೀ ಶ್ರೀಧರ ಡಿ. ಎಸ್., ಶ್ರೀ ಗಿಂಡಿಮನೆ ಮೃತ್ಯುಂಜಯ, ಶ್ರೀ ನಟರಾಜ ಉಪಾಧ್ಯ, ಶ್ರೀ ಅನಂತ ಪದ್ಮನಾಭ ಫಾಟಕ್, ಶ್ರೀ ಇಟಗಿ ಮಹಾಬಲೇಶ್ವರ ಭಟ್ ,ಶ್ರೀ ಅಜಿತ್ ಕಾರಂತ್ ಹಾಗೂ ಶ್ರೀಮತಿ ಅಶ್ವಿನಿ ಹೊದಲ

ಪರಿಕಲ್ಪನೆ ಹಾಗೂ ಸಂಯೋಜನೆ: ಶ್ರೀ ರವಿ ಮಡೋಡಿ, ಬೆಂಗಳೂರು

ಜ್ಹೂಮ್‌ ವೇದಿಕೆ ಹಾಗೂ ಯಕ್ಷವಾಹಿನಿ ಪೇಸ್ಬುಕ್ ನಲ್ಲಿ ನೇರ ಪ್ರಸಾರ

Join Zoom Meeting
Meeting ID: 853 9827 5307
Passcode: 372592

YakshaVahini Facebook Profile:

ಸಂಪರ್ಕ ಸಂಖ್ಯೆ : 9986384205, 9686112237, 9632824391

ಸರ್ವರಿಗೂ ಸ್ವಾಗತ ಬಯಸುವ
ಯಕ್ಷವಾಹಿನಿ (ರಿ), ಬೆಂಗಳೂರು

Saturday 28 August 2021

ಯಕ್ಷಪುಸ್ತಕಕೋಶವನ್ನು ಬೆಳೆಸಲು ನಿಮ್ಮ ಸಹಕಾರ ಇರಲಿ!


ಯಕ್ಷಗಾನದಲ್ಲಿ ಸಾಹಿತ್ಯವನ್ನು  ಮೂರು ವಿಭಾಗದಲ್ಲಿ ವಿಭಾಗಿಸಬಹುದು.  ಒಂದು ಪ್ರಸಂಗ ಸಾಹಿತ್ಯ- ಅದು ರಂಗಪಠ್ಯವಾಗಿದ್ದರೆ  ಎರಡನೇದಾಗಿ ಮೌಖಿಕ ಸಾಹಿತ್ಯವು ರಂಗಭಾಷೆಯಾಗಿ ಪ್ರಸ್ತುತಗೊಳ್ಳುತ್ತದೆ.  ಮೂರನೆಯದು ವಿರ್ಮರ್ಶಾ/ ಸಂಶೋಧನಾ/ ಅಭಿನಂದನಾ ಸಾಹಿತ್ಯ. ಈ ಮೂರನೇ ವಿಧದ ಸಾಹಿತ್ಯವು ಯಕ್ಷಗಾನದಲ್ಲಿ ಸರಿ ಸುಮಾರು 70-80 ವರುಷಗಳಿಂದ ದೊಡ್ಡ ಮಟ್ಟದಲ್ಲಿ ರಚನೆಯಾಗುತ್ತಿದೆ. ಇದರಲ್ಲಿ ಇಲ್ಲಿಯವರೆಗೆ 40ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳು ಮಂಡನೆಯಾಗಿವೆ. ಸಾವಿರಾರು ಅಭಿನಂದನ ಗ್ರಂಥಗಳು, ಸಂಸ್ಮರಣ ಗ್ರಂಥಗಳು,ಕಲಾವಿದರ ಆತ್ಮ ಕಥೆಗಳು ಬಂದಿವೆ. ಇನ್ನು ಪತ್ರಿಕೆಯಲ್ಲಿ   ವಿಮರ್ಶೆಗಳು, ಚಿಂತನೆಗಳು ದೊಡ್ಡ ಪ್ರಮಾಣದಲ್ಲಿ ದಾಖಲಾಗಿವೆ. ಇದರ ಜೊತೆಗೆ ನಾಲ್ಕೈದು ಯಕ್ಷಗಾನಕ್ಕಾಗಿಯೇ ಇರುವ ಪತ್ರಿಕೆಗಳಿವೆ.  ಹೀಗೆ ಎಲ್ಲವು ಸೇರಿದರೆ ಅಂದಾಜು ಹತ್ತು ಸಾವಿರದಷ್ಟು ಕೃತಿಗಳು ರಚನೆಯಾಗಿವೆ. ಒಂದು ಕಲಾ ಪ್ರಕಾರದ ಮೇಲೆ ಇಷ್ಟೊಂದು ಸಂಖ್ಯೆಯ ಕೃತಿಗಳು ಕನ್ನಡವನ್ನು ಬಳಸಿ ರಚನೆಯಾಗಿರುವುದು ದಾಖಲೆಯೇ ಸರಿ. 

ಹೀಗಿದ್ದರೂ ಹಿಂದೆ ಪ್ರಕಟಿತ ಎಷ್ಟೋ ಕೃತಿಗಳು ಇಂದು ಮರು ಮುದ್ರಣದ ಭಾಗ್ಯವನ್ನು ಕಾಣದೆ ಹಾಳಾಗಿ ಹೋಗುತ್ತಿರುವುದು ವ್ಯಥೆಯ ಸಂಗತಿ. ಇಂತಹ ಅಮೂಲ್ಯವಾದ ಯಕ್ಷಗಾನದ ಸಂಪತ್ತನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ನಮ್ಮ ಯಕ್ಷವಾಹಿನಿ ತಂಡವು ಇವುಗಳನ್ನು ಸುವ್ಯವಸ್ಥಿತವಾಗಿ ಒಂದು ಕಡೆಯಲ್ಲಿ ರಕ್ಷಿಸುವುದಕ್ಕೆ ಮುಂದಾಗಿದೆ. ಇದುವೇ ಯಕ್ಷಪುಸ್ತಕಕೋಶ.

ಯಕ್ಷಗಾನದಲ್ಲಿ ಬಂದ ಅಭಿನಂದನ ಗ್ರಂಥಗಳು, ಸಂಸ್ಮರಣ ಗ್ರಂಥಗಳು, ಕಲಾವಿದರ ಆತ್ಮ ಕಥೆಗಳು ಹೀಗೆ ಎಲ್ಲವನ್ನು ಡಿಜಿಟಲಿಕರಣ ಮಾಡಿ ಅದನ್ನು ಅರ್ಚಿವ್ ಮಾಡಿ ಸರ್ವರಿಗೂ ಅದು ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶ. ನಿಮ್ಮಲ್ಲಿರುವ ಅಮೂಲ್ಯ ಪುಸ್ತಕಗಳಿದ್ದರೇ ದಯಮಾಡಿ ನಮ್ಮ ಈ-ಲೈಬ್ರರಿಗೆ ನೀವು ಅದನ್ನು ಕೊಡಬಹುದು. ಎಲ್ಲರೂ ಸೇರಿ ಯಕ್ಷಗಾನದ ಅಮೂಲ್ಯ ದಾಖಲೆಗಳನ್ನು ಉಳಿಸುವ ಪ್ರಯತ್ನವನ್ನು ಮಾಡೋಣ.  ಹಕ್ಕು ಸ್ವಾಮ್ಯದ ತೊಂದರೆ ಬರದಂತೆ ಲೇಖಕರ ಹಾಗೂ ಪ್ರಕಾಶಕರ ಅನುಮತಿಯನ್ನೂ ಕೊಡಿಸುವಿರಾಗಿ ನಂಬುತ್ತೇವೆ.

ಈಗಾಗಲೇ ವಿದ್ಯುನ್ಮಾನ ಪ್ರತಿಯಲ್ಲಿರುವ ಗ್ರಂಥಗಳನ್ನೂ ಲೇಖನಗಳನ್ನು ಸ್ವೀಕರಿಸಿ, ಕ್ರೋಢೀಕರಿಸಿ, ಅಂತರರಜಾಲದ ಮೂಲಕ ಉಚಿತ ಬಿತ್ತರದ ವ್ಯವಸ್ಥೆ ಮಾಡುತ್ತೇವೆ. ಜೊತೆಗೆ ನೀವು ಕೂಡ ಹಕ್ಕು ಸ್ವಾಮ್ಯಕ್ಕೆ ಒಳಪಡದ ಅಥವಾ ಅಂತರ್ಜಾಲಕ್ಕೆ ಸೇರಿಸಲು ಒಪ್ಪಿಗೆ ಇರುವ ಪುಸ್ತಕಗಳನ್ನು ನಮಗೆ ನೀಡಬಹುದಾಗಿದೆ. 

ನಮ್ಮ ಪ್ರಸಂಗೇತರ ಯಕ್ಷಗಾನ ಗ್ರಂಥಗಳ ಈ-ಲೈಬ್ರರಿಯ ಕೊಂಡಿಯನ್ನು ಈ ಕೆಳಗೆ ಕೊಡಲಾಗಿದೆ:

 https://drive.google.com/file/d/1z8eh0irQ4j7wdo2xSinj85pjyDnnc10X/view


ಈ ಯೋಜನೆಯಲ್ಲಿ ನೀವು ಸ್ವಯಂಸೇವಕರಾಗಿ ಸಹಕರಿಸುವರಾದರೆ, ಈ ಕೆಳಗಿನ ಕೊಂಡಿಯನ್ನು ಒತ್ತಿ ನಮ್ಮ ವಾಟ್ಸ್ಯಾಪ್‌ ಸಮೂಹವನ್ನು ಸೇರಿಕೊಂಡು ನಿಮ್ಮನ್ನು ಪರಿಚಯಿಸಿಕೊಂಡು ಹೇಗೆ ಸಹಾಯ ಮಾಡುವಿರೆಂದು ತಿಳಿಸಿರಿ.

https://chat.whatsapp.com/DFFEgYGWaoq3qRlbzdTnjK


 

ಧನ್ಯವಾದಗಳು

ಯಕ್ಷಪುಸ್ತಕಕೋಶ ತಂಡ

ಯಕ್ಷವಾಹಿನಿ ಬೆಂಗಳೂರು

ಆಮಂತ್ರಣ: ಯಕ್ಷ ಸಾಹಿತ್ಯ ಸಾಂಗತ್ಯ-01 : 29-ಆಗಸ್ಟ್-2021, ಸಂಜೆ 6 ರಿಂದ - ಶ್ರೀ ಎಚ್ ಡುಂಡಿರಾಜ್ ಅವರಿಂದ ಹಟ್ಟಿಯಂಗಡಿ ರಾಮಭಟ್ಟ ವಿರಚಿತ ʻಸುಭದ್ರಾ ಕಲ್ಯಾಣʼ ಪ್ರಸಂಗ ಅವಲೋಕನ


 

ಯಕ್ಷವಾಹಿನಿ (ರಿ), ಬೆಂಗಳೂರು

ಯಕ್ಷ ಸಾಹಿತ್ಯ ಸಾಂಗತ್ಯ-01

(ನಾಡಿನ ಖ್ಯಾತ ಕವಿಗಳು, ಚಿಂತಕರು, ವಿದ್ವಾಂಸರಿಂದ ಯಕ್ಷ ಪ್ರಸಂಗಗಳ ಸಾಹಿತ್ಯ ಅವಲೋಕನದ ಸರಣಿ ಕಾರ್ಯಕ್ರಮ)

ದಿನಾಂಕ: 29-ಆಗಸ್ಟ್-2021, ಭಾನುವಾರ ಸಂಜೆ 6 ರಿಂದ

ಖ್ಯಾತ ಕವಿ, ನಾಟಕಕಾರ ಶ್ರೀ ಎಚ್ ಡುಂಡಿರಾಜ್ ಅವರಿಂದ ಹಟ್ಟಿಯಂಗಡಿ ರಾಮಭಟ್ಟ ವಿರಚಿತ ʻಸುಭದ್ರಾ ಕಲ್ಯಾಣʼ ಪ್ರಸಂಗ ಅವಲೋಕನ

ಮುಖ್ಯ ಅತಿಥಿಗಳು: ಶ್ರೀ ರವೀಂದ್ರ ಭಟ್, ಕಾರ್ಯನಿರ್ವಾಹಕ ಸಂಪಾದಕರು, ಪ್ರಜಾವಾಣಿ

ಸಮನ್ವಯ: ಡಾ. ಸಿ. ಆನಂದರಾಮ ಉಪಾಧ್ಯ, ಯಕ್ಷಗಾನ ವಿದ್ವಾಂಸರು

ತಾಂತ್ರಿಕ ನಿರ್ವಹಣೆ: ಶ್ರೀ ಲನಾ ಭಟ್

ಸಲಹೆ ಸಹಕಾರ: ಪ್ರೊ. ಎಮ್. ಎಲ್. ಸಾಮಗ, ಶ್ರೀ ಶ್ರೀಧರ ಡಿ. ಎಸ್., ಶ್ರೀ ಗಿಂಡಿಮನೆ ಮೃತ್ಯುಂಜಯ, ಶ್ರೀ ನಟರಾಜ ಉಪಾಧ್ಯ, ಶ್ರೀ ಅನಂತ ಪದ್ಮನಾಭ ಫಾಟಕ್, ಶ್ರೀ ಇಟಗಿ ಮಹಾಬಲೇಶ್ವರ ಭಟ್ ,ಶ್ರೀ ಅಜಿತ್ ಕಾರಂತ್ ಹಾಗೂ ಶ್ರೀಮತಿ ಅಶ್ವಿನಿ ಹೊದಲ

ಪರಿಕಲ್ಪನೆ ಹಾಗೂ ಸಂಯೋಜನೆ: ಶ್ರೀ ರವಿ ಮಡೋಡಿ, ಬೆಂಗಳೂರು

ಜ್ಹೂಮ್‌ ವೇದಿಕೆ ಹಾಗೂ ಯಕ್ಷವಾಹಿನಿ ಪೇಸ್ಬುಕ್ ನಲ್ಲಿ ನೇರ ಪ್ರಸಾರ

Join Zoom Meeting
Meeting ID: 853 9827 5307
Passcode: 372592

YakshaVahini Facebook Profile:

ಸಂಪರ್ಕ ಸಂಖ್ಯೆ : 9986384205, 9686112237, 9632824391

ಸರ್ವರಿಗೂ ಸ್ವಾಗತ ಬಯಸುವ
ಯಕ್ಷವಾಹಿನಿ (ರಿ), ಬೆಂಗಳೂರು

ಆಮಂತ್ರಣ: ಯಕ್ಷಶೋಧಸಾರ-೦೩: “ಯಕ್ಷಗಾನ ಶೈಕ್ಷಣಿಕ ಸಂಶೋಧನೆ” - ಡಾ. ಆನಂದರಾಮ ಉಪಾಧ್ಯ - ಶನಿವಾರ 04-09-2021 ಸಂಜೆ 6.00ರಿಂದ 7.30ರ ತನಕ








ಆಮಂತ್ರಣ:


ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ

ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)


ಯಕ್ಷಶೋಧಸಾರ-೦೩: “ಯಕ್ಷಗಾನ ಶೈಕ್ಷಣಿಕ ಸಂಶೋಧನೆ”

ಉಪನ್ಯಾಸಕರು: ಡಾ. ಆನಂದರಾಮ ಉಪಾಧ್ಯ,  ಕನ್ನಡ ಲೇಖಕರು ಮತ್ತು ಯಕ್ಷಗಾನ ಸಂಶೋಧಕರು


ನಿರ್ವಹಣೆ: ಡಾ. ಸಿಬಂತಿ ಪದ್ಮನಾಭ, ಯಕ್ಷದೀವಿಗೆ (ರಿ), ತುಮಕೂರು


ದಿನಾಂಕ ಶನಿವಾರ 04-09-2021 ಸಂಜೆ 6.00ರಿಂದ  7.30ರ ತನಕ


ಜ್ಹೂಮ್‌ ವೇದಿಕೆಯ ಕೊಂಡಿ:  https://us02web.zoom.us/j/81722545963

ಫೇಸ್ಬುಕ್‌ ನಲ್ಲಿ ನೇರ ಪ್ರಸಾರ: https://www.facebook.com/profile.php?id=100012390542277

Tuesday 24 August 2021

ಆಮಂತ್ರಣ: ಯಕ್ಷಶೋಧಸಾರ-೦೨: “ಯಕ್ಷಗಾನ ಗ್ರಂಥ ಸಂಶೋಧನೆ” - ಡಾ. ಪಾದೇಕಲ್ಲು ವಿಷ್ಣು ಭಟ್ಟ

 


ಆಮಂತ್ರಣ:

 

ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ

ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)

 

ಯಕ್ಷಶೋಧಸಾರ-೦೨: “ಯಕ್ಷಗಾನ ಗ್ರಂಥ ಸಂಶೋಧನೆ

ಉಪನ್ಯಾಸಕರು: ಡಾ. ಪಾದೇಕಲ್ಲು ವಿಷ್ಣು ಭಟ್ಟ, ಕನ್ನಡ ಮತ್ತು ತುಳು ಲೇಖಕರು, ಯಕ್ಷಗಾನ ಸಂಶೋಧಕರು

 

ನಿರ್ವಹಣೆ: ಶ್ರೀಮತಿ ಆರತಿ ಪಟ್ರಮೆ, ಅಧ್ಯಕ್ಷರು, ಯಕ್ಷದೀವಿಗೆ (ರಿ), ತುಮಕೂರು

 

ದಿನಾಂಕ ಮಂಗಳವಾರ 24-08-2021 ಸಂಜೆ 6.00ರಿಂದ  7.30ರ ತನಕ

 

ಜ್ಹೂಮ್ವೇದಿಕೆಯ ಕೊಂಡಿ: ಜ್ಹೂಮ್ವೇದಿಕೆಯ ಕೊಂಡಿ:  https://us02web.zoom.us/j/84766524999?pwd=U1VCUnZYdmprVnRuV1JNakQzcWc2Zz09

ಫೇಸ್ಬುಕ್ನಲ್ಲಿ ನೇರ ಪ್ರಸಾರ:

 https://www.facebook.com/profile.php?id=100012390542277

Saturday 21 August 2021

ಆಮಂತ್ರಣ: ಯಕ್ಷಶೋಧಸಾರ-೦೧: “ಯಕ್ಷಗಾನ ಸಂಶೋಧನೆಯ ನೆಲೆಗಳು”

 

ಆಮಂತ್ರಣ:


ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ

ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)


ಯಕ್ಷಶೋಧಸಾರ-೦೧: “ಯಕ್ಷಗಾನ ಸಂಶೋಧನೆಯ ನೆಲೆಗಳು” 

ಉಪನ್ಯಾಸಕರು: ಡಾ. ಎಂ. ಪ್ರಭಾಕರ ಜೋಶಿ, ಖ್ಯಾತ ಯಕ್ಷಗಾನ ವಿದ್ವಾಂಸರು ಹಾಗೂ ಅರ್ಥದಾರಿಗಳು


ಸರಣಿಯ ಉದ್ಘಾಟನೆ: ಪ್ರೊ. ಎಮ್.‌ ಎಲ್.‌ ಸಾಮಗ, ಗೌರವಾಧ್ಯಕ್ಷರು, ಯಕ್ಷವಾಹಿನಿ (ರಿ)

ನಿರ್ವಹಣೆ: ಶ್ರೀಮತಿ ಆರತಿ ಪಟ್ರಮೆ, ಅಧ್ಯಕ್ಷರು, ಯಕ್ಷದೀವಿಗೆ (ರಿ), ತುಮಕೂರು


ದಿನಾಂಕ ಶನಿವಾರ 21-08-2021 ಸಂಜೆ 6.00ರಿಂದ  7.30ರ ತನಕ


ಜ್ಹೂಮ್‌ ವೇದಿಕೆಯ ಕೊಂಡಿ: 

https://us02web.zoom.us/j/86409287392?pwd=eEN1NHk5eGlCYVhMRnQxMjlqVjVZdz09


ಫೇಸ್ಬುಕ್‌ ನಲ್ಲಿ ನೇರ ಪ್ರಸಾರ:

 https://www.facebook.com/profile.php?id=100012390542277

Sunday 8 August 2021

ಡಾ. ಆನಂದರಾಮ ಉಪಾಧ್ಯರ “ಯಕ್ಷಪಥ” ಪುಸ್ತಕದ ಉಚಿತ ಪ್ರಸಾರಕ್ಕಾಗಿ ಅಂತರಜಾಲ ಪ್ರತಿಯೂ ಯಕ್ಷವಾಹಿನಿಯ ಮೂಲಕ ಇಂದೇ ಲೋಕಾರ್ಪಣೆ; ಈ ಮೂಲಕ “ಯಕ್ಷಪುಸ್ತಕಕೋಶ” ಎಂಬ ಹೊಸ ಯೋಜನೆಗೆ ಚಾಲನೆ!



ಆಗಸ್ಟ್೦೮, ೨೦೨೧

ಡಾ. ಆನಂದರಾಮ ಉಪಾಧ್ಯರ ಸಂಪಾದಕತ್ವದ, ಬೆಂಗಳೂರಿನ ಯಕ್ಷಗಾನದ ಹೆಜ್ಜೆಗುರುತುಗಳ ಸುತ್ತಲಿನ ಯಕ್ಷಪಥಎಂಬ ಅಪೂರ್ವ ಪುಸ್ತಕವು ಇಂದು ಲೋಕಾರ್ಪಣೆಯಾಗುತ್ತಿರುವಾಗಲೇ, ಅದರ ಅಂತರಜಾಲ ಪ್ರತಿಯನ್ನು ಕೂಡಾ  ಇಂದೇ ಲೋಕಾರ್ಪಣೆ ಮಾಡುತ್ತಿರುವುದು ಒಂದು ವಿಶಿಷ್ಟ ಸಂಗತಿ. ಭೌತಿಕರೂಪದ ಪುಸ್ತಕದ ಜೊತೆಜೊತೆಗೇ ಪಿಡಿಎಫ್ರೂಪದ ಪುಸ್ತಕವನ್ನೂ ಅಂತರಜಾಲದ ಮೂಲಕ ಉಚಿತ ಹಂಚುವಿಕೆಗಾಗಿ ಸಮಾನಾಂತರವಾಗಿ ಲೋಕಾರ್ಪಣೆ ಮಾಡುವ ಈ ಹೊಸ ಸಂಪ್ರದಾಯದ ಹಿಂದಿನ ಉದಾರತೆ, ಕ್ರಿಯಾಶೀಲತೆ, ಕ್ರಾಂತಿಕಾರೀ ಮನೋಭಾವ ಮತ್ತು ಇದರಿಂದ ಕನ್ನಡ ಹಾಗೂ ಯಕ್ಷಗಾನ ಸಾರಸ್ವತ ಲೋಕದಲ್ಲಿ ಉದ್ಭವಿಸುವ ಹೊಸ ಸ್ಫೂರ್ತಿಯು ಅಪಾರ. ಈ ಕುರಿತಾಗಿ ಡಾ. ಆನಂದರಾಮ ಉಪಾಧ್ಯರು ಹಾಗೂ ಅವರಿಗೆ ಸಹಕರಿಸುತ್ತಿರುವ ಭರತ್ಪಬ್ಲಿಕೇಶನ್‌  ಎಂಬ ಪ್ರಕಾಶಕರು ಈರ್ವರಿಗೂ ನಮ್ಮ ಅಭಿನಂದನೆಗಳು.

 

ಯಕ್ಷವಾಹಿನಿ ಸಂಸ್ಥೆಯ ಸ್ಥಾಪಕ ವಿಶ್ವಸ್ಥರು ಹಾಗೂ ಮೊದಲ ಕಾರ್ಯಾಧ್ಯಕ್ಷರೂ ಆಗಿರುವ ಆನಂದರಾಮ ಉಪಾಧ್ಯರು, ಈ ಅಂತರಜಾಲದ ಪ್ರತಿಯ ಉಚಿತ ಹಂಚುವಿಕೆಯ ಜವಾಬ್ದಾರಿಯನ್ನು ಯಕ್ಷವಾಹಿನಿ ಸಂಸ್ಥೆಗೆ ಒಪ್ಪಿಸಿರುವುದು ಅರ್ಥವತ್ತಾಗಿದೆ. “ಯಕ್ಷಗಾನಕ್ಕಾಗಿ ತನ್ನಿಂದ ಏನು?” ಎಂಬ ಪ್ರಶ್ನೆಯ ಸುತ್ತ ಮುಡಿಪಾಗಿ ತೊಡಗಿಕೊಂಡಿರುವ ಸ್ವಯಂಸೇವಕರ ಮುಡಿಪಿನ ಕೆಲಸಗಳಿಂದ ಸಾಧ್ಯವಾಗಿರುವ,  ಅಂತರಜಾಲದ ಮೂಲಕ ಉಚಿತ ಹಂಚುವಿಕೆಯ ಅನೇಕ ದಾಖಲಾತಿಯ ಯೋಜನೆಗಳ ಮಧ್ಯೆ, ಅವರೆಲ್ಲರಿಗೆ ನಾಯಕರೊಲ್ಲಬ್ಬರಾಗಿರುವ ಡಾ. ಆನಂದರಾಮ ಉಪಾಧ್ಯರು ಯಕ್ಷವಾಹಿನಿ ಸಂಸ್ಥೆ ಹಾಗೂ ಸಮೂಹದ ಮುಖ್ಯ ಚೇತನದ ಮುಖವಾಣಿಯಾಗಿ ಈ ಉದಾರತೆಯ ಮೂಲಕ ಇನ್ನಷ್ಟು ಬೆಳಗುತ್ತಿದ್ದಾರೆ.

 ಯಕ್ಷವಾಹಿನಿಯ ಸಹಯೋಗದ ಮೂಲಕ ಲೋಕಾರ್ಪಣಗೊಳ್ಳುತ್ತಿರುವ ಯಕ್ಷಪಥಪುಸ್ತಕವನ್ನು ಓದಲು ಮತ್ತು ಕೆಳಗಿಳಿಸಿಕೊಳ್ಳಲು ಈ ಕೆಳಗಿನ ಕೊಂಡಿಯನ್ನು ಒತ್ತಿ:

https://drive.google.com/file/d/1sQgmTA2mPjuM00oAO5zP7QFEoSKneJBF/view?usp=sharing

 ಸ್ವಯಂಸೇವಕರ ಬಲ ಹೆಚ್ಚಿದಂತೆ ಹೆಚ್ಚಿನ ಯೋಜನೆಗಳನ್ನೂ ಹಾಗೂ ಹಾಲಿ ಯೋಜನೆಗಳ ಆಳ ವಿಸ್ತಾರಗಳನ್ನು ಸದಾ ವಿಸ್ತರಿಸುವ ಕುರಿತು ಯಕ್ಷವಾಹಿನಿಯ ನಾಯಕತ್ವವು ಸದಾ ಹಪಹಪಿಸುತ್ತಿದೆ. ಉಚಿತ ಪ್ರಸಾರಕ್ಕೆ ಸಿಗುವ ಎಲ್ಲಾ ಪ್ರಸಂಗಪ್ರತಿಗಳನ್ನು ಕ್ರೋಢಿಸುತ್ತಾ ಹೋಗುವ ಪ್ರಸಂಗಪ್ರತಿಸಂಗ್ರಹಎಂಬ ನಮ್ಮ ಯೋಜನೆಯು ಸಾಕಷ್ಟು ಯಶಸ್ಸನ್ನು ಕಂಡಿರುವುದರಿಂದ, ಅದೇ ರೀತಿಯಲ್ಲಿ ಪ್ರಸಂಗೇತರ ಇತರ ಯಕ್ಷಗಾನ ಪುಸ್ತಕಗಳ ಉಚಿತ ಪ್ರಸಾರಕ್ಕಾಗಿಯೇ ಯಕ್ಷಪುಸ್ತಕಕೋಶಎಂಬ ಹೊಸ ಯೋಜನೆಯ ಅನಾವರಣಕ್ಕಾಗಿ ನಮ್ಮ ತುಡಿತವಿದ್ದರೂ ಯೋಗ್ಯ ಸ್ವಯಂಸೇವಕರ ನಾಯಕತ್ವ ಮತ್ತು ಮುಡಿಪಿನ ಕೆಲಸದ ಕೊರತೆಯಲ್ಲಿ ಈ ಯೋಜನೆಯ ಚಾಲನೆಯನ್ನು ಮುಂದೂಡುತ್ತಲೇ ಬಂದಿರುತ್ತೇವೆ. ಆದರೆ, ಡಾ. ಉಪಾಧ್ಯರ ಈ ಹೆಜ್ಜೆ ನಮ್ಮನ್ನು ಸ್ಫೂರ್ತಿಯಿಂದ ಬಡಿದೆಬ್ಬಿಸಿದೆ. ಹಾಗಾಗಿ, ಯಾವುದೇ ಸಿದ್ದತೆಯ ಮೊದಲೇ ಯಕ್ಷಪುಸ್ತಕಕೋಶಯೋಜನೆಯ ಚಾಲನೆಗೆ  ಇಂದೇ ಅನುವು ಕೊಟ್ಟು, ಹೆಚ್ಚಿನ ಸ್ವಯಂಸೇವಕರ ಸಹಕಾರ ಸಿಗುವ ತನಕ ಈ ಹೊಸ ಯೋಜನೆಯನ್ನು ನಿಧಾನಗತಿಯಲ್ಲಿ ಸಾಗಿಸುವ ಬದ್ಧತೆಗೆ ಒಳಪಡುತ್ತಿದ್ದೇವೆ.

 

ಯಕ್ಷಪುಸ್ತಕಕೋಶ ಎಂಬ ಯೋಜನೆಯ ಚಾಲನೆಯ ಸಂಕೇತವಾಗಿ ಕೋಶಕೋಷ್ಟಕದ ಮಾದರಿಯನ್ನು ಗಮನಿಸಲು ಈ ಕೆಳಗಿನ ಕೊಂಡಿಯನ್ನು ಒತ್ತಿ:

https://drive.google.com/file/d/1z8eh0irQ4j7wdo2xSinj85pjyDnnc10X/view?usp=sharing

 ಈ ಯೋಜನೆಯು ಚಾಲನೆಗೆ ಬರುವ ಮುನ್ನವೇ ನಮ್ಮ ಯಕ್ಷವಾಹಿನಿ ಸಮೂಹದ  ಕೆ. ಉಮೇಶ ಆಚಾರ್ಯ ಗೇರುಕಟ್ಟೆ ಇವರ “ಯಕ್ಷಗಾನ ಆಚಾರ್ಯ ಅರ್ಕುಳ ಸುಬ್ರಾಯ ಆಚಾರ್ಯ” ಎಂಬ ಪುಸ್ತಕದ ಅಂತರಜಾಲ ಪ್ರತಿಯು ನಮ್ಮನ್ನು ಈಗಾಗಲೇ ಸೇರಿದ್ದು, ಆ ಪುಸ್ತಕದ ಕೊಂಡಿಯನ್ನೂ ಕೋಷ್ಟಕದಲ್ಲಿ ನೀವು ಗಮನಿಸಬಹುದಾಗಿದೆ!

 ಯಕ್ಷವಾಹಿನಿಯ ಕಾರ್ಯಾಧ್ಯಕ್ಷ ಪದವಿಯನ್ನು ಯುವ ನಾಯಕರಾದ ರವಿ ಮಡೋಡಿ ಅವರ ಹೆಗಲಿಗೇರಿಸಿ, ಸಂಸ್ಥೆಯ ಏಳಿಗೆಯ ರಾಯಭಾರಿಯಾಗಿ ದುಡಿಯಲು ಹೊರಟಿರುವ ಡಾ. ಆನಂದರಾಮ ಉಪಾಧ್ಯರು ತನ್ನ ಇತಿಮಿತಿಗಳ ನಡುವೆ ಈ ರೀತಿಯ ಅಭೂತಪೂರ್ವ ಚೇತನವನ್ನು ಹುಟ್ಟಿಸುವ ಪ್ರಯತ್ನಗಳ ಮೂಲಕ ಯಕ್ಷವಾಹಿನಿಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಬುದ್ಧ ಸಂಸ್ಥೆ ಹಾಗೂ ಸಮೂಹವಾಗಿ ಬೆಳೆಯುವತ್ತ ತಮ್ಮ ನಾಯಕತ್ವದ ಒಂದು ಝಲಕ್ ಅನ್ನು ಈ ರೀತಿಯಾಗಿ ತೋರಿಸಿ ನಮ್ಮೆಲ್ಲರನ್ನೂ ಮೆಚ್ಚಿಸಿದ್ದಾರೆ.

 

ಈ ಶುಭ ಸಂದರ್ಭದಲ್ಲಿ ನಾವು ಪ್ರಾರ್ಥಿಸುವುದಿಷ್ಟೇ: ಡಾ. ಆನಂದರಾಮ ಉಪಾಧ್ಯರಿಟ್ಟ ಹೆಜ್ಜೆಯ ದಾರಿಯಲ್ಲಿಯೇ, ಎಲ್ಲಾ ಕನ್ನಡದ ಹಾಗೂ ಯಕ್ಷಗಾನದ ಲೇಖಕರುಗಳು ಹಾಗೂ ಪ್ರಕಾಶಕರುಗಳು ಅಂತರಜಾಲದ ಪ್ರತಿಗಳನ್ನು ಕೂಡಾ ಸಮಾನಾಂತರವಾಗಿ ಬಿಡುಗೊಡೆಗೊಳಿಸುವ ಉದ್ಯಮಶೀಲತೆಗೆ ಬದ್ಧರಾಗಲಿ. ಹಣಕಾಸಿನ ಮಿತಿಯನ್ನು ಮೀರಿ, ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯ ಮೂಲ ಕಾರಣಗಳಿಗಾಗಿ  ಪುಸ್ತಕಗಳನ್ನು ಬರೆಯುವ /  ಪ್ರಕಾಶಿಸುವ ಎಲ್ಲಾ ಲೇಖಕರು / ಪ್ರಕಾಶಕರುಗಳು ಉಚಿತ ಪ್ರಸಾರಕ್ಕಾಗಿ ಅಂತರಜಾಲ ಪ್ರತಿಗಳನ್ನು ಕೊಡ ಮಾಡುತ್ತಾ ಹೋಗಲಿ, ಅಂತಹ ಪ್ರತಿಗಳ ದಾಖಲಾತಿ ಹಾಗೂ ಉಚಿತ ಪ್ರಸಾರದ ಸುತ್ತ ನಮ್ಮ ಸಂಸ್ಥೆ / ಸಮೂಹವು ಸದಾ ಮುಡಿಪಾಗಿದೆ. ಈ ಮುಡಿಪಿನ ಸುತ್ತ ಹೆಚ್ಚಿನ ಸಾಧನೆಯ ಸಾಕಾರಕ್ಕಾಗಿ ಇನ್ನೂ ಹೆಚ್ಚಿನ ಸ್ವಯಂಸೇವಕರ ಸಹಾಯ ಸಹಕಾರಗಳನ್ನು ಈ ಮೂಲಕ ಕೋರುತ್ತಿದ್ದೇವೆ.  ಸ್ವಯಂಸೇವೆಯ ಸಾಧ್ಯತೆ ಇಲ್ಲದವರು ನಮ್ಮ ಸಂಸ್ಥೆ ಹಾಗೂ ಯೋಜನೆಗಳನ್ನು ಬಲ ಪಡಿಸುವತ್ತ ಹಣಕಾಸಿನ ಸಹಾಯ ಮಾಡುವವರಿದ್ದರೆ ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿ ಹಣಕಾಸಿನ ಸಂಪನ್ಮೂಲದ ಬಲದಲ್ಲಿ ಹೆಚ್ಚಿನ ಕ್ರಿಯಾಶೀಲತೆಯತ್ತ ತೊಡಗಿಕೊಳ್ಳಲು ಸಿದ್ಧರಿದ್ದೇವೆ.

ಈ ಸಂದರ್ಭದಲ್ಲಿ ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಪ್ರಸಂಗಕೋಶ ಯೋಜನೆಗಳ ಸುತ್ತ ಯಕ್ಷಗಾನ ಪ್ರಸಂಗ ಪುಸ್ತಕಗಳ ಅಂತರಜಾಲ ಪ್ರತಿಗಳನ್ನು ಹುಟ್ಟಿಸಲು ಉದಾರತೆಯಿಂದ ಅನುಮತಿ ಕೊಟ್ಟ ನೂರಾರು ಪ್ರಸಂಗಕವಿಗಳಿಗೆ ಹಾಗೂ ಸಂಬಂಧಿತ ಪ್ರಕಾಶಕರಿಗೆ ನಮ್ಮ ನಮನಗಳು. ಇವರೆಲ್ಲರ ಈವರೆಗಿನ ಉದಾರತೆಯೇ ಡಾ. ಆನಂದರಾಮ ಉಪಾಧ್ಯರ ಪ್ರಸಂಗೇತರ ಪುಸ್ತಕಕ್ಕೂ ಈ ರೀತಿಯ ಅನುಮತಿ ಕೊಡುವತ್ತ ಮಾರ್ಗದರ್ಶಕವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು!

 

 

ಯಕ್ಷವಾಹಿನಿಯಿಂದ “ಯಕ್ಷಪುಸ್ತಕಕೋಶ” ಯೋಜನೆಯ ಚಾಲನೆಗೆ ಅವಕಾಶ ಕೊಟ್ಟ ಇಂದಿನ ಕಾರ್ಯಕ್ರಮದ ರೂವಾರಿಗಳಾದ “ಸಾಹಿತ್ಯ ವಿಚಾರ ವೇದಿಕೆ”, ಗಿರಿನಗರ ಸಮೂಹಕ್ಕೆ ಕೃತಜ್ಞತೆಗಳು!

 ಈ ಅಪೂರ್ವ ಸಂದರ್ಭದಲ್ಲಿ ಡಾ. ಆನಂದರಾಮ ಉಪಾಧ್ಯರು ಹಾಗೂ ಅವರ ಕುಟುಂಬದವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಹಾಗೂ ಯಶಸ್ಸನ್ನು ಕೋರುವ,

 - ಯಕ್ಷವಾಹಿನಿ ಆಡಳಿತ ಮಂಡಳಿ







Monday 2 August 2021

ಯಕ್ಷವಾಹಿನಿ (ರಿ) ಅರ್ಪಿಸುವ ಆನ್ಲೈನ್‌ ಸಮಾವೇಶ: “ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಯಕ್ಷಗಾನ ಸಾಹಿತ್ಯದ ಕೊಡುಗೆ” - ಆಗಸ್ಟ್‌ 08, 2021 ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 12.30 ರ ತನಕ



ಯಕ್ಷವಾಹಿನಿ (ರಿ.) ಅರ್ಪಿಸುವ ಆನ್ಲೈನ್‌ ಸಮಾವೇಶ:   

ಆಗಸ್ಟ್‌ 08, 2021 ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 12.30 ರ ತನಕ

 

ವಿಷಯ: “ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಯಕ್ಷಗಾನ ಸಾಹಿತ್ಯದ ಕೊಡುಗೆ

 

ಯಕ್ಷಗಾನ ಸಾಹಿತ್ಯದ ವೈವಿಧ್ಯ ಹಾಗೂ ವೈಶಿಷ್ಯಗಳ ಅವಲೋಕನ, ಯಕ್ಷಗಾನೇತರ ಕನ್ನಡ ಸಾಹಿತ್ಯಲೋಕದ ದಿಗ್ಗಜರಿಂದ ಯಕ್ಷಗಾನ ಸಾಹಿತ್ಯದ ವಿಮರ್ಶೆ, ಯಕ್ಷಗಾನದ ಛಂದೋಬದ್ಧ ಗೇಯ ಸಾಹಿತ್ಯದ ತಳಹದಿಯಾಗಿರುವ ಛಂದಸ್ಸಿನ ಬಂಧಗಳ ಸುತ್ತ ಲಯಬದ್ಧ ಮಟ್ಟುಗಳ ಅಸ್ತಿತ್ವ ಹಾಗೂ ರಾಗ ತಾಳ, ಶೈಲಿಗಳ ವೈವಿಧ್ಯದ ಮೂಲಕ ಯಕ್ಷಗಾನ ಪ್ರಸಂಗ ಸಾಹಿತ್ಯವು ಹಿಮ್ಮೇಳವನ್ನು ವೈಭವೀಕರಿಸುವ ಕುರಿತಾಗಿ ತೆಂಕು ಬಡಗು ಶೈಲಿಯ ಭಾಗವತಿಕೆಯ ಮೂಲಕ ಪ್ರಸ್ತುತಿ,  ಕನ್ನಡ ಸಾಹಿತ್ಯ ಲೋಕದಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆಯತ್ತ ಚಿಂತನೆ, ಪ್ರಶ್ನೋತ್ತರಗಳು ಹಾಗೂ ಸಂಬಂಧಿತ ವಿಚಾರ ವಿನಿಮಯಗಳು.

 

ಯೂಟೂಬ್ಹಾಗೂ ಫೇಸ್ಬುಕ್ಮೂಲಕ ನಡೆಯುವ ಸಮಾನಾಂತರ ಬಿತ್ತರವನ್ನು ನೋಡಲು ಕೊಂಡಿಗಳನ್ನು ಕೆಳಗೆ ಕೊಡಲಾಗಿದೆ.

https://www.youtube.com/channel/UChoRckEcQE4J97iPIWIkHbw

https://www.facebook.com/profile.php?id=100012390542277

www.yakshavahini.com

 

ಸಮಾವೇಶದ ಪ್ರಶ್ನೋತ್ತರಗಳಲ್ಲಿ ಭಾಗವಹಿಸಲು ಬೇಕಾಗಿರುವ ಙೂಮ್ವೇದಿಕೆಯ ಕೊಂಡಿಗಾಗಿ ಅಶ್ವಿನಿ ಹೊದಲ ಅವರನ್ನು 96861 12237 ನಂಬರಿನ ಮೂಲಕ ವಾಟ್ಸ್ಯಾಪ್ ನಲ್ಲಿ ಸಂಪರ್ಕಿಸಿ.

ನಿಮ್ಮ ಪ್ರೋತ್ಸಾಹ ಹಾಗೂ ಸಹಕಾರದ ನಿರೀಕ್ಷೆಯಲ್ಲಿ!