ಯಕ್ಷವಾಹಿನಿ ಸಂಸ್ಥೆಯ ಸ್ಥಾಪಕ ವಿಶ್ವಸ್ಥರು ಹಾಗೂ ಮೊದಲ ಕಾರ್ಯಾಧ್ಯಕ್ಷರು ಆಗಿರುವ ಡಾ. ಆನಂದರಾಮ ಉಪಾಧ್ಯರು, ಪುಸ್ತಕದ ಲೋಕಾರ್ಪಣೆಯ ಜೊತೆಜೊತೆಗೇ ಈ ಅಂತರಜಾಲದ ಪ್ರತಿಯನ್ನೂ ಲೋಕಾರ್ಪಣೆಗೊಳ್ಳಿಸಿ, ವಿದ್ಯುನ್ಮಾನ ಪ್ರತಿಯ ಉಚಿತ ಹಂಚುವಿಕೆಯ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.
ಯಕ್ಷವಾಹಿನಿಯ ಸಹಯೋಗದ ಮೂಲಕ ಲೋಕಾರ್ಪಣಗೋಳ್ಳುತ್ತಿರುವ “ಸಮಾಹಿತ” ಪುಸ್ತಕದ ವಿದ್ಯುನ್ಮಾನ ಪ್ರತಿ ನ್ನು ಓದಲು ಮತ್ತು ಕೆಳಗಿಳಿಸಿಕೊಳ್ಳಲು ಈ ಕೆಳಗಿನ ಕೊಂಡಿಯನ್ನು ಒತ್ತಿ:
https://drive.google.com/file/d/1OPC0OF1JF94NYusdrtKlZOJqOeAd_y3Z/view?usp=sharing
ಪ್ರಸಂಗೇತರ ಇತರ ಯಕ್ಷಗಾನ ಪುಸ್ತಕಗಳ ಉಚಿತ ಪ್ರಸಾರಕ್ಕಾಗಿಯೇ “ಯಕ್ಷಪುಸ್ತಕಕೋಶ” ಎಂಬ ಹೊಸ ಯೋಜನೆಯು ಈಗಾಗಲೇ ಜಾರಿಯಲ್ಲಿದೆ. ಇಂದಿನ ಪುಸ್ತಕವು ೬೦ನೇ ಪುಸ್ತಕವಾಗಿ ಸೇರ್ಪಡೆಯಾಗುತ್ತಿದೆ.
ಯಕ್ಷಪುಸ್ತಕಕೋಶದ ಕೋಷ್ಟಕಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ:
https://drive.google.com/file/d/1xKHXsUslzMR5tRYyTRp7hbyFFXX9zV79/view?usp=sharing
ಯಕ್ಷವಾಹಿನಿಯ ಕಾರ್ಯಾಧ್ಯಕ್ಷ ಪದವಿಯನ್ನು ಯುವ ನಾಯಕರಾದ ರವಿ ಮಡೋಡಿ ಅವರ ಹೆಗಲಿಗೇರಿಸಿ, ಸಂಸ್ಥೆಯ ಏಳಿಗೆಯ ರಾಯಭಾರಿಯಾಗಿ ದುಡಿಯಲು ಹೊರಟಿರುವ ಡಾ. ಆನಂದರಾಮ ಉಪಾಧ್ಯರು ತನ್ನ ಇತಿಮಿತಿಗಳ ನಡುವೆ ಈ ರೀತಿಯ ಅಭೂತಪೂರ್ವ ಚೇತನವನ್ನು ಹುಟ್ಟಿಸುವ ಪ್ರಯತ್ನಗಳ ಮೂಲಕ ಯಕ್ಷವಾಹಿನಿಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಬುದ್ಧ ಸಂಸ್ಥೆ ಹಾಗೂ ಸಮೂಹವಾಗಿ ಬೆಳೆಯುವತ್ತ ತಮ್ಮ ನಾಯಕತ್ವದ ಒಂದು ಝಲಕ್ ಅನ್ನು ಪದೇ ಪದೇ ತೋರಿಸಿ ನಮ್ಮೆಲ್ಲರನ್ನೂ ಮೆಚ್ಚಿಸಿದ್ದಾರೆ.
ಈ ಶುಭ ಸಂದರ್ಭದಲ್ಲಿ ನಾವು ಪ್ರಾರ್ಥಿಸುವದಿಷ್ಟೇ: ಡಾ. ಆನಂದರಾಮ ಉಪಾಧ್ಯರಿಟ್ಟ ಹೆಜ್ಜೆಯ ದಾರಿಯಲ್ಲಿಯೇ, ಎಲ್ಲಾ ಕನ್ನಡದ ಹಾಗೂ ಯಕ್ಷಗಾನದ ಲೇಖರುಗಳು ಹಾಗೂ ಪ್ರಕಾಶಕರುಗಳು ಅಂತರಜಾಲದ ಪ್ರತಿಗಳನ್ನು ಕೂಡಾ ಸಮಾನಾಂತರವಾಗಿ ಬಿಡುಗೊಡೆಗೊಳಿಸುವ ಉದ್ಯಮಶೀಲತೆಗೆ ಬದ್ಧರಾಗಲಿ. ಹಣಕಾಸಿನ ಮಿತಿಯನ್ನು ಮೀರಿ, ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯ ಮೂಲ ಕಾರಣಗಳಿಗಾಗಿ ಪುಸ್ತಕಗಳನ್ನು ಬರೆಯುವ / ಪ್ರಕಾಶಿಸುವ ಎಲ್ಲಾ ಲೇಖಕರು / ಪ್ರಕಾಶಕರುಗಳು ಉಚಿತ ಪ್ರಸಾರಕ್ಕಾಗಿ ಅಂತರಜಾಲ ಪ್ರತಿಗಳನ್ನು ಕೊಡ ಮಾಡುತ್ತಾ ಹೋಗಲಿ, ಅಂತಹ ಪ್ರತಿಗಳ ದಾಖಲಾತಿ ಹಾಗೂ ಉಚಿತ ಪ್ರಸಾರದ ಸುತ್ತ ನಮ್ಮ ಸಂಸ್ಥೆ / ಸಮೂಹವು ಸದಾ ಮುಡಿಪಾಗಿದೆ. ಈ ಮುಡಿಪಿನ ಸುತ್ತ ಹೆಚ್ಚಿನ ಸಾಧನೆಯ ಸಾಕಾರಕ್ಕಾಗಿ ಇನ್ನೂ ಹೆಚ್ಚಿನ ಸ್ವಯಂಸೇವಕರ ಸಹಾಯ ಸಹಕಾರಗಳನ್ನು ಈ ಮೂಲಕ ಕೋರುತ್ತಿದ್ದೇವೆ. ಸ್ವಯಂಸೇವೆಯ ಸಾಧ್ಯತೆ ಇಲ್ಲದವರು ನಮ್ಮ ಸಂಸ್ಥ ಹಾಗೂ ಯೋಜನೆಗಳನ್ನು ಬಲ ಪಡಿಸುವುತ್ತ ಹಣಕಾಸಿನ ಸಹಾಯ ಮಾಡುವಿದ್ದರೆ ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿ ಹಣಕಾಸಿನ ಸಂಪನ್ಮೂಲದ ಬಲದಲ್ಲಿ ಹೆಚ್ಚಿನ ಕ್ರಿಯಾಶೀಲತೆಯತ್ತ ತೊಡಗಿಕೊಳ್ಳಲು ಸಿದ್ಧರಿದ್ದೇವೆ.
ಈ ಸಂದರ್ಭದಲ್ಲಿ ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಪ್ರಸಂಗಕೋಶ ಯೋಜನೆಗಳ ಸುತ್ತ ಯಕ್ಷಗಾನ ಪ್ರಸಂಗ ಪುಸ್ತಕಗಳ ಅಂತರಜಾಲ ಪ್ರತಿಗಳನ್ನು ಹುಟ್ಟಿಸಲು ಉದಾರತೆಯಿಂದ ಅನುಮತಿ ಕೊಟ್ಟ ನೂರಾರು ಪ್ರಸಂಗಕವಿಗಳಿಗೆ ಹಾಗೂ ಸಂಬಂಧಿತ ಪ್ರಕಾಶಕರಿಗೆ ನಮ್ಮ ನಮನಗಳು. ಇವರೆಲ್ಲರ ಈವರೆಗಿನ ಉದಾರತೆಯೇ ಡಾ. ಆನಂದರಾಮ ಉಪಾಧ್ಯರ ಪ್ರಸಂಗೇತರ ಪುಸ್ತಕಕ್ಕೂ ಈ ರೀತಿಯ ಅನುಮತಿ ಕೊಡುವತ್ತ ಮಾರ್ಗದರ್ಶಕವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು!
ಈ ಅಪೂರ್ವ ಸಂದರ್ಭದಲ್ಲಿ ಡಾ. ಆನಂದರಾಮ ಉಪಾಧ್ಯರು ಹಾಗೂ ಅವರ ಕುಟುಂಬದವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಹಾಗೂ ಯಶಸ್ಸನ್ನು ಕೋರುವ,
ಯಕ್ಷವಾಹಿನಿ ಆಡಳಿತ ಮಂಡಳಿ
ಯಕ್ಷಪುಸ್ತಕಕೋಶ ಯೋಜನಾ ಮಂಡಳಿ
No comments:
Post a Comment