Saturday, 16 October 2021

ಡಾ. ಆನಂದರಾಮ ಉಪಾಧ್ಯರ “ಯಕ್ಷದರ್ಶನ” ಪುಸ್ತಕದ ಪರಿಷ್ಕೃತ ಎರಡನೇ ಆವೃತ್ತಿಯ ಲೋಕಾರ್ಪಣೆಯಂದೇ ಉಚಿತ ಪ್ರಸಾರಕ್ಕಾಗಿ ಅಂತರಜಾಲ ಪ್ರತಿಯೂ ಯಕ್ಷವಾಹಿನಿಯಯಕ್ಷಪುಸ್ತಕಕೋಶಕ್ಕೆ ಇಂದೇ ಸೇರ್ಪಡೆ!



 

ಅಕ್ಟೋಬರ೧೬, ೨೦೨೧

 

ಡಾ. ಆನಂದರಾಮ ಉಪಾಧ್ಯರ “ಯಕ್ಷದರ್ಶನ” ಪುಸ್ತಕದ ಎರಡನೇ ಪರಿಷ್ಕೃತ ಆವೃತ್ತಿಯು ಇಂದು ಯಕ್ಷವಾಹಿನಿಯ ಆನ್ಲೈನ್‌ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಯಕ್ಷಗಾನದ ಕುರಿತಾದ ಪುಸ್ತಕವೊಂದು ಎರಡನೇ ಆವೃತ್ತಿಯಾಗಿ ಹೊರಬರುವುದಲ್ಲದೇ, ಅದು ಮತ್ತಷ್ಟು ಪರಿಷ್ಕರಣಗೊಂಡಿರುವ ಹಿಂದಿನ ಲೇಖಕರ ಯಶಸ್ಸಿಗೆ ಅಭಿನಂದನೆಗಳು.

 

ವಿಶೇಷವೇನಂದರೆ, ಡಾ. ಆನಂದರಾಮ ಉಪಾಧ್ಯರು ತಾವೇ ಹಿಂದೆ ತೋರಿಸಿಕೊಟ್ಟ ಹೊಸ ಸಂಪ್ರದಾಯದಂತೆ, ಈ ಪರಿಷ್ಕೃತ ಆವೃತ್ತಿಯ ಅಂತರಜಾಲ ಪ್ರತಿಯನ್ನು ಯಕ್ಷವಾಹಿನಿಯ ಯಕ್ಷಪುಸ್ತಕಕೋಶಕ್ಕೆ ಅನುದಾನವಾಗಿ ಕೊಟ್ಟು, ಅಂತರಜಾಲ ಪ್ರತಿಯೂ ಇಂದೇ  ಲೋಕಾರ್ಪಣೆಯಾಗಲು ಸಹಕರಿಸಿದ್ದಾರೆ.

 

ಈ ಹಿಂದೆ, ಬೆಂಗಳೂರಿನ ಯಕ್ಷಗಾನದ ಹೆಜ್ಜೆಗುರುತುಗಳ ಸುತ್ತಲಿನ ಯಕ್ಷಪಥಎಂಬ ತಮ್ಮದೇ ಪುಸ್ತಕವು  ಲೋಕಾರ್ಪಣೆಯಾಗುತ್ತಿರುವಾಗಲೇ, ಅದರ ಅಂತರಜಾಲ ಪ್ರತಿಯನ್ನು ಕೂಡಾ  ಯಕ್ಷಪುಸ್ತಕಕೋಶಕ್ಕೆ ಸೇರಿಸುವ ಮೂಲಕ, ಉಚಿತ ಪ್ರಸಾರಕ್ಕಾಗಿ  ಅಂದೇ ಲೋಕಾರ್ಪಣೆ ಮಾಡಿದ ಅವರ ಉದಾರತೆಯನ್ನು ನೆನಪಿಸಿಕೊಳ್ಳುತ್ತಿದ್ದೇವೆ.

 

ಯಕ್ಷವಾಹಿನಿ ಸಂಸ್ಥೆಯ ಸ್ಥಾಪಕ ವಿಶ್ವಸ್ಥರು ಹಾಗೂ ಮೊದಲ ಕಾರ್ಯಾಧ್ಯಕ್ಷರು ಆಗಿರುವ ಆನಂದರಾಮ ಉಪಾಧ್ಯರು, ಈ ಅಂತರಜಾಲದ ಪ್ರತಿಯ ಉಚಿತ ಹಂಚುವಿಕೆಯ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದ್ದಲ್ಲದೇ, ಅದರ ಜವಾಬ್ದಾರಿಯನ್ನು ಯಕ್ಷವಾಹಿನಿ ಸಂಸ್ಥೆಗೆ ಒಪ್ಪಿಸಿರುವುದು ಅರ್ಥವತ್ತಾಗಿದೆ. “ಯಕ್ಷಗಾನಕ್ಕಾಗಿ ತನ್ನಿಂದ ಏನು?” ಎಂಬ ಪ್ರಶ್ನೆಯ ಸುತ್ತ ಮುಡಿಪಾಗಿ ತೊಡಗಿಕೊಂಡಿರುವ ಸ್ವಯಂಸೇವಕರ ಮುಡಿಪಿನ ಕೆಲಸಗಳಿಂದ ಸಾಧ್ಯವಾಗಿರುವ,  ಅಂತರಜಾಲದ ಮೂಲಕ ಉಚಿತ ಹಂಚುವಿಕೆಯ ಅನೇಕ ದಾಖಲಾತಿಯ ಯೋಜನೆಗಳ ಮಧ್ಯೆ, ಅವರೆಲ್ಲರಿಗೆ ನಾಯಕರೊಲ್ಲಬ್ಬರಾಗಿರುವ ಡಾ. ಆನಂದರಾಮ ಉಪಾಧ್ಯರು ಯಕ್ಚವಾಹಿನಿ ಸಂಸ್ಥ ಹಾಗೂ ಸಮೂಹದ ಮುಖ್ಯ ಚೇತನದ ಮುಖವಾಣಿಯಾಗಿ ಈ ಉದಾರತೆಯ ಮೂಲಕ ಇನ್ನಷ್ಟು ಬೆಳಗುತ್ತಿದ್ದಾರೆ.

 

ಯಕ್ಷವಾಹಿನಿಯ ಸಹಯೋಗದ ಮೂಲಕ ಲೋಕಾರ್ಪಣಗೋಳ್ಳುತ್ತಿರುವ ಯಕ್ಷದರ್ಶನಪುಸ್ತಕದ ಪರಿಷ್ಕೃತ ಎರಡನೇ ಆವೃತ್ತಿಯನ್ನು ಓದಲು ಮತ್ತು ಕೆಳಗಿಳಿಸಿಕೊಳ್ಳಲು ಈ ಕೆಳಗಿನ ಕೊಂಡಿಯನ್ನು ಒತ್ತಿ:

https://drive.google.com/file/d/1JTMw52bQXBNAdVKEcwjgqKplGyP12W3i/view?usp=sharing

 

ಸ್ವಯಂಸೇವಕರ ಬಲ ಹೆಚ್ಚಿದಂತೆ ಹೆಚ್ಚಿನ ಯೋಜನೆಗಳನ್ನೂ ಹಾಗೂ ಹಾಲಿ ಯೋಜನೆಗಳ ಆಳ ವಿಸ್ತಾದಗಳನ್ನು ಸದಾ ವಿಸ್ತರಿಸುವ ಕುರಿತು ಯಕ್ಷವಾಹಿನಿಯ ನಾಯಕತ್ವವು ಸದಾ ಹಪಹಪಿಸುತ್ತಿದೆ. ಉಚಿತ ಪ್ರಸಾರಕ್ಕೆ ಸಿಗುವ ಎಲ್ಲಾ ಪ್ರಸಂಗಪ್ರತಿಗಳನ್ನು ಕ್ರೋಢಿಸುತ್ತಾ ಹೋಗುವ ಪ್ರಸಂಗಪ್ರತಿಸಂಗ್ರಹಎಂಬ ನಮ್ಮ ಯೋಜನೆಯು ಸಾಕಷ್ಟು ಯಶಸ್ಸನ್ನು ಕಂಡಿರುವುದರಿಂದ, ಅದೇ ರೀತಿಯಲ್ಲಿ ಪ್ರಸಂಗೇತರ ಇತರ ಯಕ್ಷಗಾನ ಪುಸ್ತಕಗಳ ಉಚಿತ ಪ್ರಸಾರಕ್ಕಾಗಿಯೇ ಯಕ್ಷಪುಸ್ತಕಕೋಶಎಂಬ ಹೊಸ ಯೋಜನೆಯು ಈಗಾಗಲೇ ಜಾರಿಯಲ್ಲಿದೆ.  ಇಂದಿನ ಯಕ್ಷದರ್ಶನ ಪುಸ್ತಕವು ೫೩ನೇ ಪುಸ್ತಕವಾಗಿ ಸೇರ್ಪಡೆಯಾಗುತ್ತಿದೆ.

 

ಯಕ್ಷಪುಸ್ತಕಕೋಶದ ಕೋಷ್ಟಕಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ:

https://drive.google.com/file/d/1xKHXsUslzMR5tRYyTRp7hbyFFXX9zV79/view?usp=sharing


ಯಕ್ಷವಾಹಿನಿಯ ಕಾರ್ಯಾಧ್ಯಕ್ಷ ಪದವಿಯನ್ನು ಯುವ ನಾಯಕರಾದ ರವಿ ಮಡೋಡಿ ಅವರ ಹೆಗಲಿಗೇರಿಸಿ, ಸಂಸ್ಥೆಯ ಏಳಿಗೆಯ ರಾಯಭಾರಿಯಾಗಿ ದುಡಿಯಲು ಹೊರಟಿರುವ ಡಾ. ಆನಂದರಾಮ ಉಪಾಧ್ಯರು ತನ್ನ ಇತಿಮಿತಿಗಳ ನಡುವೆ ಈ ರೀತಿಯ ಅಭೂತಪೂರ್ವ ಚೇತನವನ್ನು ಹುಟ್ಟಿಸುವ ಪ್ರಯತ್ನಗಳ ಮೂಲಕ ಯಕ್ಷವಾಹಿನಿಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಬುದ್ಧ ಸಂಸ್ಥೆ ಹಾಗೂ ಸಮೂಹವಾಗಿ ಬೆಳೆಯುವತ್ತ ತಮ್ಮ ನಾಯಕತ್ವದ ಒಂದು ಝಲಕ್ ಅನ್ನು ಪದೇ ಪದೇ ತೋರಿಸಿ ನಮ್ಮೆಲ್ಲರನ್ನೂ ಮೆಚ್ಚಿಸಿದ್ದಾರೆ.

 

ಈ ಶುಭ ಸಂದರ್ಭದಲ್ಲಿ ನಾವು ಪ್ರಾರ್ಥಿಸುವದಿಷ್ಟೇ: ಡಾ. ಆನಂದರಾಮ ಉಪಾಧ್ಯರಿಟ್ಟ ಹೆಜ್ಜೆಯ ದಾರಿಯಲ್ಲಿಯೇ, ಎಲ್ಲಾ ಕನ್ನಡದ ಹಾಗೂ ಯಕ್ಷಗಾನದ ಲೇಖರುಗಳು ಹಾಗೂ ಪ್ರಕಾಶಕರುಗಳು ಅಂತರಜಾಲದ ಪ್ರತಿಗಳನ್ನು ಕೂಡಾ ಸಮಾನಾಂತರವಾಗಿ ಬಿಡುಗೊಡೆಗೊಳಿಸುವ ಉದ್ಯಮಶೀಲತೆಗೆ ಬದ್ಧರಾಗಲಿ. ಹಣಕಾಸಿನ ಮಿತಿಯನ್ನು ಮೀರಿ, ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯ ಮೂಲ ಕಾರಣಗಳಿಗಾಗಿ  ಪುಸ್ತಕಗಳನ್ನು ಬರೆಯುವ /  ಪ್ರಕಾಶಿಸುವ ಎಲ್ಲಾ ಲೇಖಕರು / ಪ್ರಕಾಶಕರುಗಳು ಉಚಿತ ಪ್ರಸಾರಕ್ಕಾಗಿ ಅಂತರಜಾಲ ಪ್ರತಿಗಳನ್ನು ಕೊಡ ಮಾಡುತ್ತಾ ಹೋಗಲಿ, ಅಂತಹ ಪ್ರತಿಗಳ ದಾಖಲಾತಿ ಹಾಗೂ ಉಚಿತ ಪ್ರಸಾರದ ಸುತ್ತ ನಮ್ಮ ಸಂಸ್ಥೆ / ಸಮೂಹವು ಸದಾ ಮುಡಿಪಾಗಿದೆ. ಈ ಮುಡಿಪಿನ ಸುತ್ತ ಹೆಚ್ಚಿನ ಸಾಧನೆಯ ಸಾಕಾರಕ್ಕಾಗಿ ಇನ್ನೂ ಹೆಚ್ಚಿನ ಸ್ವಯಂಸೇವಕರ ಸಹಾಯ ಸಹಕಾರಗಳನ್ನು ಈ ಮೂಲಕ ಕೋರುತ್ತಿದ್ದೇವೆ.  ಸ್ವಯಂಸೇವೆಯ ಸಾಧ್ಯತೆ ಇಲ್ಲದವರು ನಮ್ಮ ಸಂಸ್ಥ ಹಾಗೂ ಯೋಜನೆಗಳನ್ನು ಬಲ ಪಡಿಸುವುತ್ತ ಹಣಕಾಸಿನ ಸಹಾಯ ಮಾಡುವಿದ್ದರೆ ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿ ಹಣಕಾಸಿನ ಸಂಪನ್ಮೂಲದ ಬಲದಲ್ಲಿ ಹೆಚ್ಚಿನ ಕ್ರಿಯಾಶೀಲತೆಯತ್ತ ತೊಡಗಿಕೊಳ್ಳಲು ಸಿದ್ಧರಿದ್ದೇವೆ.

ಈ ಸಂದರ್ಭದಲ್ಲಿ ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಪ್ರಸಂಗಕೋಶ ಯೋಜನೆಗಳ ಸುತ್ತ ಯಕ್ಷಗಾನ ಪ್ರಸಂಗ ಪುಸ್ತಕಗಳ ಅಂತರಜಾಲ ಪ್ರತಿಗಳನ್ನು ಹುಟ್ಟಿಸಲು ಉದಾರತೆಯಿಂದ ಅನುಮತಿ ಕೊಟ್ಟ ನೂರಾರು ಪ್ರಸಂಗಕವಿಗಳಿಗೆ ಹಾಗೂ ಸಂಬಂಧಿತ ಪ್ರಕಾಶಕರಿಗೆ ನಮ್ಮ ನಮನಗಳು. ಇವರೆಲ್ಲರ ಈವರೆಗಿನ ಉದಾರತೆಯೇ ಡಾ. ಆನಂದರಾಮ ಉಪಾಧ್ಯರ ಪ್ರಸಂಗೇತರ ಪುಸ್ತಕಕ್ಕೂ ಈ ರೀತಿಯ ಅನುಮತಿ ಕೊಡುವತ್ತ ಮಾರ್ಗದರ್ಶಕವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು!

 

ಈ ಅಪೂರ್ವ ಸಂದರ್ಭದಲ್ಲಿ ಡಾ. ಆನಂದರಾಮ ಉಪಾಧ್ಯರು ಹಾಗೂ ಅವರ ಕುಟುಂಬದವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಹಾಗೂ ಯಶಸ್ಸನ್ನು ಕೋರುವ,

 

ಯಕ್ಷವಾಹಿನಿ ಆಡಳಿತ ಮಂಡಳಿ








Wednesday, 13 October 2021

ಆಮಂತ್ರಣ: "ಯಕ್ಷದರ್ಶನ" ಪರಿಷ್ಕೃತ ಎರಡನೇ ಆವೃತ್ತಿ ಪುಸ್ತಕ ಲೋಕಾರ್ಪಣೆ, “ಯಕ್ಷಕವಿ ನಮನ” ಉಪನ್ಯಾಸ ಸರಣಿ ಉದ್ಘಾಟನೆ, ಯಕ್ಷಕವಿ ನಮನ - ೦೧ : "ದಿ. ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ

 


ಆಮಂತ್ರಣ:

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ ಆನ್ಲೈನ್‌ ಕಾರ್ಯಕ್ರಮ:

ಪುಸ್ತಕ ಲೋಕಾರ್ಪಣೆ, “ಯಕ್ಷಕವಿ ನಮನ” ಉಪನ್ಯಾಸ ಸರಣಿ ಉದ್ಘಾಟನೆ, ಯಕ್ಷಕವಿ ನಮನ - ೦೧ : "ದಿ. ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ"

 ದಿನಾಂಕ ಶನಿವಾರ 16-10-2021 ಸಂಜೆ 6.00ರಿಂದ  7.30ರ ತನಕ

ಪುಸ್ತಕ ಲೋಕಾರ್ಪಣೆ, ಪುಸ್ತಕ ಪರಿಚಯ ಮತ್ತು ಯಕ್ಷಕವಿ ನಮನ ಸರಣಿ ಉದ್ಘಾಟನೆ: ಪ್ರೊ. ಎಮ್.‌ ಎಲ್.‌ ಸಾಮಗ ಅವರಿಂದ

ಯಕ್ಷಕವಿ ನಮನ -  ನಡುಗನ್ನಡದ ನಡೆಯನ್ನುಳಿಸಿಕೊಂಡೇ ಯಕ್ಷಕಾವ್ಯಲೋಕವನ್ನು ಕಟ್ಟಿದ, ಮುನ್ನಡೆಯುತ್ತಿರುವ ಕನ್ನಡದ ನಿಜಕವಿಗಳನ್ನು ಗೌರವಿಸುವ ಸರಣಿ; ಪರಿಕಲ್ಪನೆ: ಶ್ರೀಧರ ಡಿ. ಎಸ್.

ಯಕ್ಷಕವಿ ನಮನ-೦೧: ದಿ. ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ

 


 


ಉಪನ್ಯಾಸಕರು: ಶ್ರೀ ಶ್ರೀಧರ ಡಿ. ಎಸ್.‌; ಪ್ರಸಂಗ ಕವಿ, ತಾಳಮದ್ದಲೆ ಅರ್ಥದಾರಿ, ಯಕ್ಷಗಾನ ವಿದ್ವಾಂಸ, ಕಾದಂಬರಿಕಾರ, ಲೇಖಕ

ಅತಿಥಿ: ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ; ಕವಿ, ನಾಟಕಕಾರ, ನಟ, ಲೇಖಕ

ನಿರ್ವಹಣೆ: ಡಾ. ಆನಂದರಾಮ ಉಪಾಧ್ಯ, ಕನ್ನಡ ಲೇಖಕ, ಯಕ್ಷಗಾನ ವಿದ್ವಾಂಸ


ಜ್ಹೂಮ್ ವೇದಿಕೆಯ ಕೊಂಡಿ:   

https://us02web.zoom.us/j/84776577644?pwd=ck1KcU8wSXZMQjZ0d2xCQVE3b2JUQT09

ಫೇಸ್ಬುಕ್ನಲ್ಲಿ ನೇರ ಪ್ರಸಾರ:  https://www.facebook.com/yakshavahiniprathistana








Friday, 24 September 2021

ಇಂದು ಆನ್ಲೈನಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ "ಕವಿ ಕಾವ್ಯ ವಿಚಾರ" ಪುಸ್ತಕ ಲೋಕಾರ್ಪಣೆ ಮತ್ತು ಕವಿ ಕಾವ್ಯದ ಕುರಿತಾಗಿ ಉಪನ್ಯಾಸ!

 

ಸೆಪ್ಟೆಂಬರ ೨೫, ೨೦೨೧

ಆಮಂತ್ರಣ:

ಮಾನ್ಯರೇ,

ಇಂದು, ಪೂರ್ವಯೋಜಿತವಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ  ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ) ಕಾರ್ಯಕ್ರಮದ ಅಂಗವಾಗಿ, ಉಪನ್ಯಾಸದ ಮೊದಲು ವಿಷಯಕ್ಕೆ ನೇರ ಸಂಬಂಧಿತವಾದ ಅವರ ಹೊಸ ಕೃತಿಯ ಲೋಕಾರ್ಪಣೆಯನ್ನು ಯಕ್ಷವಾಹಿನಿಯ ಆನ್ಲೈನ್‌ ವೇದಿಕೆಯಲ್ಲೇ ಮಾಡಲಾಗುವುದು. 

ಯಕ್ಷದೀವಿಗೆ, ತುಮಕೂರು ಇವರ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಈ ಅಂಗವು ಈಗ ಸೇರಿ ಹೋಗಿರುವುದು, ಯಕ್ಷಗಾನ ಪ್ರಪಂಚದಲ್ಲಿ ಸಹಯೋಗಗಳ ಮೂಲಕ  ಇನ್ನೂ ಹೆಚ್ಚಿನ ಸಾಧ್ಯತೆ ಹಾಗೂ ಸಾಧನೆಗಳನ್ನು ಅರಸುವಲ್ಲಿ ಯಕ್ಷವಾಹಿನಿಗೆ ಮತ್ತಷ್ಟು ಸ್ಫೂರ್ತಿಯನ್ನು ಕೊಡುತ್ತಿದೆ.

ಪುಸ್ತಕದ ಲೋಕಾರ್ಪಣೆಯನ್ನು ಯಕ್ಷಗಾನ ಸಂಶೋಧಕರು ಹಾಗೂ ವಿದ್ವಾಂಸರು, ಹಾಗೂ ನಮ್ಮವರೇ ಆದ ಡಾ. ಆನಂದರಾಮ ಉಪಾಧ್ಯರು ನಡೆಸಿಕೊಡುತ್ತಾರೆ. ಆನಂತರ ಅವರೇ ಪುಸ್ತಕ ಪರಿಚಯವನ್ನು ಕೂಡಾ ಸಂಕ್ಷಿಪ್ತವಾಗಿ ತಿಳಿಸುತ್ತಾರೆ.

ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು, ನಂತರ ನಡೆಸಿಕೊಡುವ ಉಪನ್ಯಾಸದಲ್ಲಿ ಪುಸ್ತಕದ ಹೂರಣವನ್ನೆಲ್ಲಾ ಅನಾವರಣಗೊಳಿಸಲಿರುವರು. ಉಪನ್ಯಾಸದ ನಂತರದ ಪ್ರಶ್ನೋತ್ತರದಲ್ಲಿ ಹೆಚ್ಚಿನ ಚರ್ಚೆಯನ್ನು ನಿರೀಕ್ಷಿಸಿರಿ.

ಈ ಹಿಂದೆಯೇ ಬಿತ್ತರವಾದ ಇಂದಿನ ಕಾರ್ಯಕ್ರಮದ ಆಮಂತ್ರಣದ ವಿವರವನ್ನು ಕೆಳಗೆ ಕೊಡಲಾಗಿದೆ. ಡಾ. ಕಬ್ಬಿನಾಲೆಯವರಿಂದ ಈ ಹಿಂದೆ ಪ್ರಕಟವಾದ ಹೆಚ್ಚಿನ ಪುಸ್ತಕಗಳ ಚಿತ್ರಾವಳಿಯನ್ನೂ ಕೆಳಗೆ ಕೊಡಲಾಗಿದೆ. ಪುಸ್ತಕಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಲೇಖಕರನ್ನು ನೇರವಾಗಿ ಸಂಪರ್ಕಿಸಿರಿ. ( 99450 55534)

ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಸಾರಸ್ವತ ಕಿರೀಟದಲ್ಲಿರುವ ಅನೇಕ ನವಿಲುಗರಿಗಳ ಮಧ್ಯೆ,  ಈ ಇನ್ನೊಂದು ನವಿಲುಗರಿ ಸೇರಿದುದಕ್ಕೆ ಅವರನ್ನು ಅಭಿನಂದಿಸುವ, ಹಾಗೂ ಇಂದಿನ ಕಾರ್ಯಕ್ರಮದಲ್ಲಿ ನಿಮ್ಮ ಉಪಸ್ಥಿತಿಯನ್ನು ಅಪೇಕ್ಷಿಸುವ,

ಯಕ್ಷವಾಹಿನಿ ಆಡಳಿತ ಮಂಡಳಿ. 

-----------------------------



ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ

ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)

 ಯಕ್ಷಶೋಧಸಾರ-05: “ಯಕ್ಷಗಾನ ಕವಿ ಕಾವ್ಯ ಶೋಧ

 ಉಪನ್ಯಾಸಕರು: ಡಾ. ಕಬ್ಬಿನಾಲೆ ವಸಂತ ಭಾರದ್ವಾಜ  - ಪ್ರಸಂಗ ಕವಿ, ಸಂಶೋಧಕ, ಸಾಹಿತಿ, ಅಷ್ಟಾವಧಾನಿ

 ನಿರ್ವಹಣೆ: ಶ್ರೀಮತಿ ಆರತಿ ಪಟ್ರಮೆ, ಧ್ಯಕ್ಷರು, ಯಕ್ಷದೀವಿಗೆ (ರಿ)

 ದಿನಾಂಕ ಶನಿವಾರ 25-09-2021 ಸಂಜೆ 6.00ರಿಂದ  7.30ರ ತನಕ

 ಜ್ಹೂಮ್ವೇದಿಕೆಯ ಕೊಂಡಿ:   

https://us02web.zoom.us/j/86267980832?pwd=NndvdlFWL2gzREJpWFZqdUsxTFJHQT09

ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/profile.php?id=100012390542277

-----------------------

ಡಾ. ಕಬ್ಬಿನಾಲೆಯವರ ಇತರ ಯಕ್ಷಗಾನ ಕೃತಿಗಳು:










ಡಾ. ಕಬ್ಬಿನಾಲೆಯವರ ಯಕ್ಷಗಾನೇತರ ಕೃತಿಗಳು:








 

Saturday, 18 September 2021

ಆಮಂತ್ರಣ: ಯಕ್ಷಶೋಧಸಾರ-೦೪: “ತಾಳಮದ್ದಲೆ - ಇತಿಹಾಸ ಮತ್ತು ವರ್ತಮಾನ”‌ - ಶ್ರೀಧರ ಡಿ. ಎಸ್.‌ - 8-09-2021 ಸಂಜೆ 6.00ರಿಂದ 7.30ರ ತನಕ

 


ಆಮಂತ್ರಣ:

 

ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ

ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)

 

ಯಕ್ಷಶೋಧಸಾರ-೦೪: “ತಾಳಮದ್ದಲೆ - ಇತಿಹಾಸ ಮತ್ತು ವರ್ತಮಾನ

 

ಉಪನ್ಯಾಸಕರು: ಶ್ರೀಧರ ಡಿ. ಎಸ್.‌ ಪ್ರಸಂಗ ಕವಿ, ತಾಳಮದ್ದಲೆ ಅರ್ಥದಾರಿ, ಯಕ್ಷಗಾನ ವಿದ್ವಾಂಸ, ಕಾದಂಬರಿಕಾರ, ಲೇಖಕ

 

ನಿರ್ವಹಣೆ: ಡಾ. ಸಿಬಂತಿ ಪದ್ಮನಾಭ, ಯಕ್ಷದೀವಿಗೆ (ರಿ), ತುಮಕೂರು

 

ದಿನಾಂಕ ಶನಿವಾರ 18-09-2021 ಸಂಜೆ 6.00ರಿಂದ  7.30ರ ತನಕ

 

ಜ್ಹೂ‌ಮ್ ವೇದಿಕೆಯ ಕೊಂಡಿ:   

https://us02web.zoom.us/j/82894144003?pwd=K0ZtUWM0ZnVkNEVkM1RpV0xEazB1QT09


ಫೇಸ್ಬುಕ್ನಲ್ಲಿ ನೇರ ಪ್ರಸಾರ

https://www.facebook.com/profile.php?id=100012390542277

 

Sunday, 12 September 2021

ಶ್ರೀಮತಿ ಅಶ್ವಿನಿ ಹೊದಲ ಅವರಿಗೆ ಯಕ್ಷವಾಹಿನಿಯ ಪ್ರೀತ್ಯಾದರದ ವಿದಾಯ

  


ಸೆಪ್ಟೆಂಬರ ೩, ೨೦೨೧


ಯಕ್ಷವಾಹಿನಿಯ ಯೋಜನೆಗಳಲ್ಲಿ ಬಲಭೀಮನಂತೆ  ಅಪೂರ್ವ ಕೆಲಸಗಳನ್ನು ಮಾಡುತ್ತಿದ್ದ ಶ್ರೀಮತಿ ಅಶ್ವಿನಿ ಹೊದಲ ಅವರು ವೈಯಕ್ತಿಕ ಕಾರಣಗಳಿಂದಾಗಿ ಇನ್ನು ಮುಂದೆ ಯಕ್ಷವಾಹಿನಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಾಗದೇ ಇರುವ ಬಗ್ಗೆ ನಮಗೆ ತಿಳಿಸಿದ್ದಾರೆ. ನಮ್ಮೊಂದಿಗೆ ಕೆಲವೇ ವರ್ಷಗಳ ಕೆಲಸ ಮಾಡಿದರೂ ಒಂದು ಜೀವಮಾನದಷ್ಟು ಕೊಡುಗೆಯನ್ನು ಸ್ವಯಂಸೇವೆಯ ಮೂಲಕ ಕೊಟ್ಟ ಅವರನ್ನು ಭಾರ ಹೃದಯದಿಂದ ಈ ಮೂಲಕ ಕೃತಜ್ಞತೆಗಳೊಂದಿಗೆ ಬೀಳ್ಕೊಡುತ್ತಿದ್ದೇವೆ. ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಮಟ್ಟುಕೋಶ ಈ ಎರಡು ಯೋಜನೆಗಳ ಕೆಲಸಗಳಲ್ಲಿ ಬೆನ್ನುಲುಬಿನಂತಿದ್ದ ಅವರು ಯಕ್ಷಪ್ರಸಂಗಕೋಶ ಹಾಗೂ ಯಕ್ಷಪ್ರಸಂಗಪಟ್ಟಿ ಯೋಜನೆಗಳಲ್ಲೂ ಅಪಾರವಾದ ಕೊಡುಗೆಗಳನ್ನು ಕೊಟ್ಟಿರುತ್ತಾರೆ. 

ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೆ ಅದಕ್ಕೆ ನ್ಯಾಯ ಕೊಡುವತ್ತ ಪೂರ್ಣ ಸಮರ್ಪಿಸಿಕೊಳ್ಳುವ ಅಶ್ವಿನಿ ಹೊದಲ ಅವರು ಅರೆಬರೆಯಾಗಿ ಕೆಲಸ ಮಾಡುವ ಸಾಧ್ಯತೆಗಳಿಂದ ದೂರ ಇರುವ ಜಾಯಮಾನದವರು, ಆ ಕಾರಣಕ್ಕಾಗಿಯೇ ಪೂರ್ಣ ಪ್ರಮಾಣದಲ್ಲಿ ಸ್ವಯಂಸೇವೆಯ ಕ್ರಿಯಾಶೀಲತೆಯಿಂದ ದೂರವಿರುವ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಅಪಾರ ಕೊಡುಗೆಯನ್ನು ಗಮನಿಸಿ, ಅವರನ್ನು ಇತ್ತೀಚೆಗೆ ನಾವು ಆಡಳಿತಮಂಡಳಿಯಲ್ಲಿ ಸೇರಿಸಿಕೊಂಡಿದ್ದು, ಅವರನ್ನು ಇನ್ನೊಬ್ಬ ವಿಶ್ವಸ್ತರನ್ನಾಗಿ ಛಾಪಿಸುವ ನಮ್ಮ ಯೋಚನೆಗಳಿಗೆ  ಈ ಮೂಲಕ ತಡೆಯಾಗಿದೆ.

 ಯಕ್ಷವಾಹಿನಿಗೆ ಎಲ್ಲರ ಸಹಯೋಗ ಹಾಗೂ ಸಹಕಾರ ಬಯಸುವ ನಾವು ಮುಂದೆ ಅವರಿಂದ ಸಾಧ್ಯವಾಗಬಲ್ಲ ಎಲ್ಲಾ ಸಹಕಾರ, ಸಹಯೋಗಗಳಿಗೆ ಆಶಿಸುತ್ತೇವೆ. ಮುಂದೆ ಯಕ್ಷವಾಹಿನಿಯ ಆಧಾರ ಸ್ಥಂಭಗಳಲ್ಲೊಂದಾಗಿ ಅವರು ವಾಪಾಸಾಗುವ ಸಾಧ್ಯತೆಗಳೂ ಮೂಡಿ ಬರಲಿ ಎಂದು ಹಾರೈಸುತ್ತೇವೆ.

 ಕಳೆದ ಆರು ತಿಂಗಳಲ್ಲಿ ವೃತ್ತಿ ಜೀವನದಲ್ಲಿ ಅಪೂರ್ವ ಯಶಸ್ಸನ್ನು ಕಾಣುತ್ತಾ ಅವಿಶ್ರಾಂತವಾಗಿ ಯಾವತ್ತೂ ದುಡಿಯುವ ಅಶ್ವಿನಿ ಹೊದಲ ಅವರಿಗೆ ವೈಯಕ್ತಿಕ ಬದುಕಿನಲ್ಲಿ ಯಶಸ್ಸು ಹಾಗೂ ಸಾರ್ಥಕ್ಯವನ್ನು ಹಾರೈಸುವುದಲ್ಲದೇ ಅವರ ಕುಟುಂಬದವರಿಗೂ ಶುಭ ಹಾರೈಸುತ್ತಿದ್ದೇವೆ.

 ಅಶ್ವಿನಿ ಹೊದಲ ಅವರ ನಿರ್ಗಮನವು ಅವರನ್ನು ನಂಬಿಕೊಂಡು ಬಂದಿರುವ ಯೋಜನೆಗಳಿಗೆ ತಾತ್ಕಾಲಿಕ ಹಿನ್ನಡೆ ಕೊಟ್ಟರೂ, ಅವರ ಸ್ಥಾನ ತುಂಬಿಸುವತ್ತ ಅನೇಕ ಹೊಸ ಹಾಗೂ ಹಾಲಿ ಸ್ವಯಂಸೇವಕರು ನಮ್ಮ ಕೈಜೋಡಿಸಲಿ ಎಂದು ಹಾರೈಸುತ್ತೇವೆ. ಪ್ರಸಂಗಪ್ರತಿಸಂಗ್ರಹದ ಸಂಚಾಲಕತ್ವದ ಭಾರವನ್ನು  ವಹಿಸಿಕೊಳ್ಳಲು ಲ. ನಾ. ಭಟ್ಮುಂದೆ ಬಂದಿದ್ದಾರೆ. ಯಕ್ಷಮಟ್ಟುಕೋಶ ಯೋಜನೆಯಲ್ಲಿ ಅವರಿಲ್ಲದ ನಷ್ಟವನ್ನು ಭರಿಸುವ ಜವಾಬ್ದಾರಿ  ಸಂಚಾಲಕರಾದ ಅಜಿತ ಕಾರಂತರದ್ದಾದರೆ, ಯಕ್ಷಪ್ರಸಂಗಕೋಶ ಯೋಜನೆಯಲ್ಲಿ ರವಿ ಮಡೋಡಿಯವರದ್ದೂ, ಯಕ್ಷಪ್ರಸಂಗಪಟ್ಟಿ ಯೋಜನೆಯಲ್ಲಿ ನಟರಾಜ ಉಪಾಧ್ಯರದ್ದೂ ಆಗಿರುತ್ತದೆ.

 ಯಕ್ಷಗಾನವೇ ವಿಶ್ವಕಲೆಯಾಗಿ ಒಂದು ವಾಹಿನಿಯಾದರೆ, ಅದರಲ್ಲಿ ಅಳಿಲು ಸೇವೆಯಾಗಿ ತೊಡಗಿಕೊಂಡಿರುವ ಯಕ್ಷವಾಹಿನಿಯೂ ಒಂದು ನದಿಯೇ. ಇದರ ಹರಿವಿನಲ್ಲಿ ಸ್ವಯಂಸೇವಕರ ಕೊಡುಗೆಗಳು ವಾಹಿನಿಯಾಗಿ ಬರುತ್ತದೆ, ಹೋಗುತ್ತದೆ.  ಅಶ್ವಿನಿ ಹೊದಲರನ್ನು ಮೀರಿಸುವ ಸ್ವಯಂಸೇವಕರು ಮುಂದೆ ಮೂಡಿಬರುವತ್ತ ನಮ್ಮ ವಿಶ್ವಾಸವಿಲ್ಲದಿದ್ದರೂ, ಹಾಗೆಯೇ ಆಗಲಿ  ಎಂದು ನಾವು ವಿಧಿಯನ್ನು ಪ್ರಾರ್ಥಿಸುತ್ತ, ಅಂತಹ ಅನುಗ್ರಹಗಳ ಮೂಲಕವೇ  ಯಕ್ಷವಾಹಿನಿಯು ಒಂದು ಮಿತಿಯಲ್ಲಿದ್ದರೂ ತನ್ನ ಪ್ರಾಮಾಣಿಕ ಪ್ರಯತ್ನಗಳನ್ನು ಎಂದಿನಂತೆ ಮುಂದುವರೆಸುವದಲ್ಲದೇ ಇನ್ನೂ ಹೆಚ್ಚಿಸುತ್ತಾ ಹೋಗಲಿ ಎಂದು ಬೇಡಿಕೊಳ್ಳುತ್ತೇವೆ.


ಮತ್ತೊಮ್ಮೆ ಶ್ರೀಮತಿ ಅಶ್ವಿನಿ ಹೊದಲ ಅವರಿಗೆ ಕೃತಜ್ಣತೆಗಳನ್ನು ತಿಳಿಸುವ ಹಾಗೂ ಅವರಿಗೆ ಶುಭ ಹಾರೈಸುವ,

 

ಆಡಳಿತ ಮಂಡಳಿ ಸದಸ್ಯರೆಲ್ಲರು,

ಯಕ್ಷವಾಹಿನಿ, ಬೆಂಗಳೂರು