Saturday 16 October 2021

ಡಾ. ಆನಂದರಾಮ ಉಪಾಧ್ಯರ “ಯಕ್ಷದರ್ಶನ” ಪುಸ್ತಕದ ಪರಿಷ್ಕೃತ ಎರಡನೇ ಆವೃತ್ತಿಯ ಲೋಕಾರ್ಪಣೆಯಂದೇ ಉಚಿತ ಪ್ರಸಾರಕ್ಕಾಗಿ ಅಂತರಜಾಲ ಪ್ರತಿಯೂ ಯಕ್ಷವಾಹಿನಿಯಯಕ್ಷಪುಸ್ತಕಕೋಶಕ್ಕೆ ಇಂದೇ ಸೇರ್ಪಡೆ!



 

ಅಕ್ಟೋಬರ೧೬, ೨೦೨೧

 

ಡಾ. ಆನಂದರಾಮ ಉಪಾಧ್ಯರ “ಯಕ್ಷದರ್ಶನ” ಪುಸ್ತಕದ ಎರಡನೇ ಪರಿಷ್ಕೃತ ಆವೃತ್ತಿಯು ಇಂದು ಯಕ್ಷವಾಹಿನಿಯ ಆನ್ಲೈನ್‌ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಯಕ್ಷಗಾನದ ಕುರಿತಾದ ಪುಸ್ತಕವೊಂದು ಎರಡನೇ ಆವೃತ್ತಿಯಾಗಿ ಹೊರಬರುವುದಲ್ಲದೇ, ಅದು ಮತ್ತಷ್ಟು ಪರಿಷ್ಕರಣಗೊಂಡಿರುವ ಹಿಂದಿನ ಲೇಖಕರ ಯಶಸ್ಸಿಗೆ ಅಭಿನಂದನೆಗಳು.

 

ವಿಶೇಷವೇನಂದರೆ, ಡಾ. ಆನಂದರಾಮ ಉಪಾಧ್ಯರು ತಾವೇ ಹಿಂದೆ ತೋರಿಸಿಕೊಟ್ಟ ಹೊಸ ಸಂಪ್ರದಾಯದಂತೆ, ಈ ಪರಿಷ್ಕೃತ ಆವೃತ್ತಿಯ ಅಂತರಜಾಲ ಪ್ರತಿಯನ್ನು ಯಕ್ಷವಾಹಿನಿಯ ಯಕ್ಷಪುಸ್ತಕಕೋಶಕ್ಕೆ ಅನುದಾನವಾಗಿ ಕೊಟ್ಟು, ಅಂತರಜಾಲ ಪ್ರತಿಯೂ ಇಂದೇ  ಲೋಕಾರ್ಪಣೆಯಾಗಲು ಸಹಕರಿಸಿದ್ದಾರೆ.

 

ಈ ಹಿಂದೆ, ಬೆಂಗಳೂರಿನ ಯಕ್ಷಗಾನದ ಹೆಜ್ಜೆಗುರುತುಗಳ ಸುತ್ತಲಿನ ಯಕ್ಷಪಥಎಂಬ ತಮ್ಮದೇ ಪುಸ್ತಕವು  ಲೋಕಾರ್ಪಣೆಯಾಗುತ್ತಿರುವಾಗಲೇ, ಅದರ ಅಂತರಜಾಲ ಪ್ರತಿಯನ್ನು ಕೂಡಾ  ಯಕ್ಷಪುಸ್ತಕಕೋಶಕ್ಕೆ ಸೇರಿಸುವ ಮೂಲಕ, ಉಚಿತ ಪ್ರಸಾರಕ್ಕಾಗಿ  ಅಂದೇ ಲೋಕಾರ್ಪಣೆ ಮಾಡಿದ ಅವರ ಉದಾರತೆಯನ್ನು ನೆನಪಿಸಿಕೊಳ್ಳುತ್ತಿದ್ದೇವೆ.

 

ಯಕ್ಷವಾಹಿನಿ ಸಂಸ್ಥೆಯ ಸ್ಥಾಪಕ ವಿಶ್ವಸ್ಥರು ಹಾಗೂ ಮೊದಲ ಕಾರ್ಯಾಧ್ಯಕ್ಷರು ಆಗಿರುವ ಆನಂದರಾಮ ಉಪಾಧ್ಯರು, ಈ ಅಂತರಜಾಲದ ಪ್ರತಿಯ ಉಚಿತ ಹಂಚುವಿಕೆಯ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದ್ದಲ್ಲದೇ, ಅದರ ಜವಾಬ್ದಾರಿಯನ್ನು ಯಕ್ಷವಾಹಿನಿ ಸಂಸ್ಥೆಗೆ ಒಪ್ಪಿಸಿರುವುದು ಅರ್ಥವತ್ತಾಗಿದೆ. “ಯಕ್ಷಗಾನಕ್ಕಾಗಿ ತನ್ನಿಂದ ಏನು?” ಎಂಬ ಪ್ರಶ್ನೆಯ ಸುತ್ತ ಮುಡಿಪಾಗಿ ತೊಡಗಿಕೊಂಡಿರುವ ಸ್ವಯಂಸೇವಕರ ಮುಡಿಪಿನ ಕೆಲಸಗಳಿಂದ ಸಾಧ್ಯವಾಗಿರುವ,  ಅಂತರಜಾಲದ ಮೂಲಕ ಉಚಿತ ಹಂಚುವಿಕೆಯ ಅನೇಕ ದಾಖಲಾತಿಯ ಯೋಜನೆಗಳ ಮಧ್ಯೆ, ಅವರೆಲ್ಲರಿಗೆ ನಾಯಕರೊಲ್ಲಬ್ಬರಾಗಿರುವ ಡಾ. ಆನಂದರಾಮ ಉಪಾಧ್ಯರು ಯಕ್ಚವಾಹಿನಿ ಸಂಸ್ಥ ಹಾಗೂ ಸಮೂಹದ ಮುಖ್ಯ ಚೇತನದ ಮುಖವಾಣಿಯಾಗಿ ಈ ಉದಾರತೆಯ ಮೂಲಕ ಇನ್ನಷ್ಟು ಬೆಳಗುತ್ತಿದ್ದಾರೆ.

 

ಯಕ್ಷವಾಹಿನಿಯ ಸಹಯೋಗದ ಮೂಲಕ ಲೋಕಾರ್ಪಣಗೋಳ್ಳುತ್ತಿರುವ ಯಕ್ಷದರ್ಶನಪುಸ್ತಕದ ಪರಿಷ್ಕೃತ ಎರಡನೇ ಆವೃತ್ತಿಯನ್ನು ಓದಲು ಮತ್ತು ಕೆಳಗಿಳಿಸಿಕೊಳ್ಳಲು ಈ ಕೆಳಗಿನ ಕೊಂಡಿಯನ್ನು ಒತ್ತಿ:

https://drive.google.com/file/d/1JTMw52bQXBNAdVKEcwjgqKplGyP12W3i/view?usp=sharing

 

ಸ್ವಯಂಸೇವಕರ ಬಲ ಹೆಚ್ಚಿದಂತೆ ಹೆಚ್ಚಿನ ಯೋಜನೆಗಳನ್ನೂ ಹಾಗೂ ಹಾಲಿ ಯೋಜನೆಗಳ ಆಳ ವಿಸ್ತಾದಗಳನ್ನು ಸದಾ ವಿಸ್ತರಿಸುವ ಕುರಿತು ಯಕ್ಷವಾಹಿನಿಯ ನಾಯಕತ್ವವು ಸದಾ ಹಪಹಪಿಸುತ್ತಿದೆ. ಉಚಿತ ಪ್ರಸಾರಕ್ಕೆ ಸಿಗುವ ಎಲ್ಲಾ ಪ್ರಸಂಗಪ್ರತಿಗಳನ್ನು ಕ್ರೋಢಿಸುತ್ತಾ ಹೋಗುವ ಪ್ರಸಂಗಪ್ರತಿಸಂಗ್ರಹಎಂಬ ನಮ್ಮ ಯೋಜನೆಯು ಸಾಕಷ್ಟು ಯಶಸ್ಸನ್ನು ಕಂಡಿರುವುದರಿಂದ, ಅದೇ ರೀತಿಯಲ್ಲಿ ಪ್ರಸಂಗೇತರ ಇತರ ಯಕ್ಷಗಾನ ಪುಸ್ತಕಗಳ ಉಚಿತ ಪ್ರಸಾರಕ್ಕಾಗಿಯೇ ಯಕ್ಷಪುಸ್ತಕಕೋಶಎಂಬ ಹೊಸ ಯೋಜನೆಯು ಈಗಾಗಲೇ ಜಾರಿಯಲ್ಲಿದೆ.  ಇಂದಿನ ಯಕ್ಷದರ್ಶನ ಪುಸ್ತಕವು ೫೩ನೇ ಪುಸ್ತಕವಾಗಿ ಸೇರ್ಪಡೆಯಾಗುತ್ತಿದೆ.

 

ಯಕ್ಷಪುಸ್ತಕಕೋಶದ ಕೋಷ್ಟಕಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ:

https://drive.google.com/file/d/1xKHXsUslzMR5tRYyTRp7hbyFFXX9zV79/view?usp=sharing


ಯಕ್ಷವಾಹಿನಿಯ ಕಾರ್ಯಾಧ್ಯಕ್ಷ ಪದವಿಯನ್ನು ಯುವ ನಾಯಕರಾದ ರವಿ ಮಡೋಡಿ ಅವರ ಹೆಗಲಿಗೇರಿಸಿ, ಸಂಸ್ಥೆಯ ಏಳಿಗೆಯ ರಾಯಭಾರಿಯಾಗಿ ದುಡಿಯಲು ಹೊರಟಿರುವ ಡಾ. ಆನಂದರಾಮ ಉಪಾಧ್ಯರು ತನ್ನ ಇತಿಮಿತಿಗಳ ನಡುವೆ ಈ ರೀತಿಯ ಅಭೂತಪೂರ್ವ ಚೇತನವನ್ನು ಹುಟ್ಟಿಸುವ ಪ್ರಯತ್ನಗಳ ಮೂಲಕ ಯಕ್ಷವಾಹಿನಿಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಬುದ್ಧ ಸಂಸ್ಥೆ ಹಾಗೂ ಸಮೂಹವಾಗಿ ಬೆಳೆಯುವತ್ತ ತಮ್ಮ ನಾಯಕತ್ವದ ಒಂದು ಝಲಕ್ ಅನ್ನು ಪದೇ ಪದೇ ತೋರಿಸಿ ನಮ್ಮೆಲ್ಲರನ್ನೂ ಮೆಚ್ಚಿಸಿದ್ದಾರೆ.

 

ಈ ಶುಭ ಸಂದರ್ಭದಲ್ಲಿ ನಾವು ಪ್ರಾರ್ಥಿಸುವದಿಷ್ಟೇ: ಡಾ. ಆನಂದರಾಮ ಉಪಾಧ್ಯರಿಟ್ಟ ಹೆಜ್ಜೆಯ ದಾರಿಯಲ್ಲಿಯೇ, ಎಲ್ಲಾ ಕನ್ನಡದ ಹಾಗೂ ಯಕ್ಷಗಾನದ ಲೇಖರುಗಳು ಹಾಗೂ ಪ್ರಕಾಶಕರುಗಳು ಅಂತರಜಾಲದ ಪ್ರತಿಗಳನ್ನು ಕೂಡಾ ಸಮಾನಾಂತರವಾಗಿ ಬಿಡುಗೊಡೆಗೊಳಿಸುವ ಉದ್ಯಮಶೀಲತೆಗೆ ಬದ್ಧರಾಗಲಿ. ಹಣಕಾಸಿನ ಮಿತಿಯನ್ನು ಮೀರಿ, ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯ ಮೂಲ ಕಾರಣಗಳಿಗಾಗಿ  ಪುಸ್ತಕಗಳನ್ನು ಬರೆಯುವ /  ಪ್ರಕಾಶಿಸುವ ಎಲ್ಲಾ ಲೇಖಕರು / ಪ್ರಕಾಶಕರುಗಳು ಉಚಿತ ಪ್ರಸಾರಕ್ಕಾಗಿ ಅಂತರಜಾಲ ಪ್ರತಿಗಳನ್ನು ಕೊಡ ಮಾಡುತ್ತಾ ಹೋಗಲಿ, ಅಂತಹ ಪ್ರತಿಗಳ ದಾಖಲಾತಿ ಹಾಗೂ ಉಚಿತ ಪ್ರಸಾರದ ಸುತ್ತ ನಮ್ಮ ಸಂಸ್ಥೆ / ಸಮೂಹವು ಸದಾ ಮುಡಿಪಾಗಿದೆ. ಈ ಮುಡಿಪಿನ ಸುತ್ತ ಹೆಚ್ಚಿನ ಸಾಧನೆಯ ಸಾಕಾರಕ್ಕಾಗಿ ಇನ್ನೂ ಹೆಚ್ಚಿನ ಸ್ವಯಂಸೇವಕರ ಸಹಾಯ ಸಹಕಾರಗಳನ್ನು ಈ ಮೂಲಕ ಕೋರುತ್ತಿದ್ದೇವೆ.  ಸ್ವಯಂಸೇವೆಯ ಸಾಧ್ಯತೆ ಇಲ್ಲದವರು ನಮ್ಮ ಸಂಸ್ಥ ಹಾಗೂ ಯೋಜನೆಗಳನ್ನು ಬಲ ಪಡಿಸುವುತ್ತ ಹಣಕಾಸಿನ ಸಹಾಯ ಮಾಡುವಿದ್ದರೆ ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿ ಹಣಕಾಸಿನ ಸಂಪನ್ಮೂಲದ ಬಲದಲ್ಲಿ ಹೆಚ್ಚಿನ ಕ್ರಿಯಾಶೀಲತೆಯತ್ತ ತೊಡಗಿಕೊಳ್ಳಲು ಸಿದ್ಧರಿದ್ದೇವೆ.

ಈ ಸಂದರ್ಭದಲ್ಲಿ ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಪ್ರಸಂಗಕೋಶ ಯೋಜನೆಗಳ ಸುತ್ತ ಯಕ್ಷಗಾನ ಪ್ರಸಂಗ ಪುಸ್ತಕಗಳ ಅಂತರಜಾಲ ಪ್ರತಿಗಳನ್ನು ಹುಟ್ಟಿಸಲು ಉದಾರತೆಯಿಂದ ಅನುಮತಿ ಕೊಟ್ಟ ನೂರಾರು ಪ್ರಸಂಗಕವಿಗಳಿಗೆ ಹಾಗೂ ಸಂಬಂಧಿತ ಪ್ರಕಾಶಕರಿಗೆ ನಮ್ಮ ನಮನಗಳು. ಇವರೆಲ್ಲರ ಈವರೆಗಿನ ಉದಾರತೆಯೇ ಡಾ. ಆನಂದರಾಮ ಉಪಾಧ್ಯರ ಪ್ರಸಂಗೇತರ ಪುಸ್ತಕಕ್ಕೂ ಈ ರೀತಿಯ ಅನುಮತಿ ಕೊಡುವತ್ತ ಮಾರ್ಗದರ್ಶಕವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು!

 

ಈ ಅಪೂರ್ವ ಸಂದರ್ಭದಲ್ಲಿ ಡಾ. ಆನಂದರಾಮ ಉಪಾಧ್ಯರು ಹಾಗೂ ಅವರ ಕುಟುಂಬದವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಹಾಗೂ ಯಶಸ್ಸನ್ನು ಕೋರುವ,

 

ಯಕ್ಷವಾಹಿನಿ ಆಡಳಿತ ಮಂಡಳಿ








No comments:

Post a Comment