ಜ್ಹೂಮ್ ವೇದಿಕೆಯ ಕೊಂಡಿ:
https://us02web.zoom.us/j/82152670575#success
ಫೇಸ್ಬುಕ್ ಬಿತ್ತರಕ್ಕೆ ಕೊಂಡಿ:
https://www.facebook.com/yakshavahiniprathistana
ಸೆಪ್ಟೆಂಬರ ೨೫, ೨೦೨೧
ಆಮಂತ್ರಣ:
ಮಾನ್ಯರೇ,
ಇಂದು, ಪೂರ್ವಯೋಜಿತವಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ) ಕಾರ್ಯಕ್ರಮದ ಅಂಗವಾಗಿ, ಉಪನ್ಯಾಸದ ಮೊದಲು ವಿಷಯಕ್ಕೆ ನೇರ ಸಂಬಂಧಿತವಾದ ಅವರ ಹೊಸ ಕೃತಿಯ ಲೋಕಾರ್ಪಣೆಯನ್ನು ಯಕ್ಷವಾಹಿನಿಯ ಆನ್ಲೈನ್ ವೇದಿಕೆಯಲ್ಲೇ ಮಾಡಲಾಗುವುದು.
ಯಕ್ಷದೀವಿಗೆ, ತುಮಕೂರು ಇವರ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಈ ಅಂಗವು ಈಗ ಸೇರಿ ಹೋಗಿರುವುದು, ಯಕ್ಷಗಾನ ಪ್ರಪಂಚದಲ್ಲಿ ಸಹಯೋಗಗಳ ಮೂಲಕ ಇನ್ನೂ ಹೆಚ್ಚಿನ ಸಾಧ್ಯತೆ ಹಾಗೂ ಸಾಧನೆಗಳನ್ನು ಅರಸುವಲ್ಲಿ ಯಕ್ಷವಾಹಿನಿಗೆ ಮತ್ತಷ್ಟು ಸ್ಫೂರ್ತಿಯನ್ನು ಕೊಡುತ್ತಿದೆ.
ಪುಸ್ತಕದ ಲೋಕಾರ್ಪಣೆಯನ್ನು ಯಕ್ಷಗಾನ ಸಂಶೋಧಕರು ಹಾಗೂ ವಿದ್ವಾಂಸರು, ಹಾಗೂ ನಮ್ಮವರೇ ಆದ ಡಾ. ಆನಂದರಾಮ ಉಪಾಧ್ಯರು ನಡೆಸಿಕೊಡುತ್ತಾರೆ. ಆನಂತರ ಅವರೇ ಪುಸ್ತಕ ಪರಿಚಯವನ್ನು ಕೂಡಾ ಸಂಕ್ಷಿಪ್ತವಾಗಿ ತಿಳಿಸುತ್ತಾರೆ.
ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು, ನಂತರ ನಡೆಸಿಕೊಡುವ ಉಪನ್ಯಾಸದಲ್ಲಿ ಪುಸ್ತಕದ ಹೂರಣವನ್ನೆಲ್ಲಾ ಅನಾವರಣಗೊಳಿಸಲಿರುವರು. ಉಪನ್ಯಾಸದ ನಂತರದ ಪ್ರಶ್ನೋತ್ತರದಲ್ಲಿ ಹೆಚ್ಚಿನ ಚರ್ಚೆಯನ್ನು ನಿರೀಕ್ಷಿಸಿರಿ.
ಈ ಹಿಂದೆಯೇ ಬಿತ್ತರವಾದ ಇಂದಿನ ಕಾರ್ಯಕ್ರಮದ ಆಮಂತ್ರಣದ ವಿವರವನ್ನು ಕೆಳಗೆ ಕೊಡಲಾಗಿದೆ. ಡಾ. ಕಬ್ಬಿನಾಲೆಯವರಿಂದ ಈ ಹಿಂದೆ ಪ್ರಕಟವಾದ ಹೆಚ್ಚಿನ ಪುಸ್ತಕಗಳ ಚಿತ್ರಾವಳಿಯನ್ನೂ ಕೆಳಗೆ ಕೊಡಲಾಗಿದೆ. ಪುಸ್ತಕಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಲೇಖಕರನ್ನು ನೇರವಾಗಿ ಸಂಪರ್ಕಿಸಿರಿ. ( 99450 55534)
ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಸಾರಸ್ವತ ಕಿರೀಟದಲ್ಲಿರುವ ಅನೇಕ ನವಿಲುಗರಿಗಳ ಮಧ್ಯೆ, ಈ ಇನ್ನೊಂದು ನವಿಲುಗರಿ ಸೇರಿದುದಕ್ಕೆ ಅವರನ್ನು ಅಭಿನಂದಿಸುವ, ಹಾಗೂ ಇಂದಿನ ಕಾರ್ಯಕ್ರಮದಲ್ಲಿ ನಿಮ್ಮ ಉಪಸ್ಥಿತಿಯನ್ನು ಅಪೇಕ್ಷಿಸುವ,
ಯಕ್ಷವಾಹಿನಿ ಆಡಳಿತ ಮಂಡಳಿ.
-----------------------------
ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ
ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)
ಯಕ್ಷಶೋಧಸಾರ-05: “ಯಕ್ಷಗಾನ ಕವಿ ಕಾವ್ಯ ಶೋಧ”
ಉಪನ್ಯಾಸಕರು: ಡಾ. ಕಬ್ಬಿನಾಲೆ ವಸಂತ ಭಾರದ್ವಾಜ - ಪ್ರಸಂಗ ಕವಿ, ಸಂಶೋಧಕ, ಸಾಹಿತಿ, ಅಷ್ಟಾವಧಾನಿ
ನಿರ್ವಹಣೆ: ಶ್ರೀಮತಿ ಆರತಿ ಪಟ್ರಮೆ, ಅಧ್ಯಕ್ಷರು, ಯಕ್ಷದೀವಿಗೆ (ರಿ)
ದಿನಾಂಕ ಶನಿವಾರ 25-09-2021 ಸಂಜೆ 6.00ರಿಂದ 7.30ರ ತನಕ
ಜ್ಹೂಮ್ ವೇದಿಕೆಯ ಕೊಂಡಿ:
https://us02web.zoom.us/j/86267980832?pwd=NndvdlFWL2gzREJpWFZqdUsxTFJHQT09
ಫೇಸ್ಬುಕ್ ನಲ್ಲಿ ನೇರ ಪ್ರಸಾರ: https://www.facebook.com/profile.php?id=100012390542277
-----------------------
ಡಾ. ಕಬ್ಬಿನಾಲೆಯವರ ಇತರ ಯಕ್ಷಗಾನ ಕೃತಿಗಳು:
ಆಮಂತ್ರಣ:
ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ
ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)
ಯಕ್ಷಶೋಧಸಾರ-೦೪: “ತಾಳಮದ್ದಲೆ - ಇತಿಹಾಸ ಮತ್ತು ವರ್ತಮಾನ”
ಉಪನ್ಯಾಸಕರು: ಶ್ರೀಧರ ಡಿ. ಎಸ್. ಪ್ರಸಂಗ ಕವಿ, ತಾಳಮದ್ದಲೆ ಅರ್ಥದಾರಿ, ಯಕ್ಷಗಾನ ವಿದ್ವಾಂಸ, ಕಾದಂಬರಿಕಾರ, ಲೇಖಕ
ನಿರ್ವಹಣೆ: ಡಾ. ಸಿಬಂತಿ ಪದ್ಮನಾಭ, ಯಕ್ಷದೀವಿಗೆ (ರಿ), ತುಮಕೂರು
ದಿನಾಂಕ ಶನಿವಾರ 18-09-2021 ಸಂಜೆ 6.00ರಿಂದ 7.30ರ ತನಕ
ಜ್ಹೂಮ್ ವೇದಿಕೆಯ ಕೊಂಡಿ:
https://us02web.zoom.us/j/82894144003?pwd=K0ZtUWM0ZnVkNEVkM1RpV0xEazB1QT09
ಫೇಸ್ಬುಕ್ ನಲ್ಲಿ ನೇರ ಪ್ರಸಾರ:
https://www.facebook.com/profile.php?id=100012390542277
ಸೆಪ್ಟೆಂಬರ ೩, ೨೦೨೧
ಯಕ್ಷವಾಹಿನಿಯ ಯೋಜನೆಗಳಲ್ಲಿ ಬಲಭೀಮನಂತೆ ಅಪೂರ್ವ ಕೆಲಸಗಳನ್ನು ಮಾಡುತ್ತಿದ್ದ ಶ್ರೀಮತಿ ಅಶ್ವಿನಿ ಹೊದಲ ಅವರು ವೈಯಕ್ತಿಕ ಕಾರಣಗಳಿಂದಾಗಿ ಇನ್ನು ಮುಂದೆ ಯಕ್ಷವಾಹಿನಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಾಗದೇ ಇರುವ ಬಗ್ಗೆ ನಮಗೆ ತಿಳಿಸಿದ್ದಾರೆ. ನಮ್ಮೊಂದಿಗೆ ಕೆಲವೇ ವರ್ಷಗಳ ಕೆಲಸ ಮಾಡಿದರೂ ಒಂದು ಜೀವಮಾನದಷ್ಟು ಕೊಡುಗೆಯನ್ನು ಸ್ವಯಂಸೇವೆಯ ಮೂಲಕ ಕೊಟ್ಟ ಅವರನ್ನು ಭಾರ ಹೃದಯದಿಂದ ಈ ಮೂಲಕ ಕೃತಜ್ಞತೆಗಳೊಂದಿಗೆ ಬೀಳ್ಕೊಡುತ್ತಿದ್ದೇವೆ. ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಮಟ್ಟುಕೋಶ ಈ ಎರಡು ಯೋಜನೆಗಳ ಕೆಲಸಗಳಲ್ಲಿ ಬೆನ್ನುಲುಬಿನಂತಿದ್ದ ಅವರು ಯಕ್ಷಪ್ರಸಂಗಕೋಶ ಹಾಗೂ ಯಕ್ಷಪ್ರಸಂಗಪಟ್ಟಿ ಯೋಜನೆಗಳಲ್ಲೂ ಅಪಾರವಾದ ಕೊಡುಗೆಗಳನ್ನು ಕೊಟ್ಟಿರುತ್ತಾರೆ.
ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೆ ಅದಕ್ಕೆ ನ್ಯಾಯ ಕೊಡುವತ್ತ ಪೂರ್ಣ ಸಮರ್ಪಿಸಿಕೊಳ್ಳುವ ಅಶ್ವಿನಿ ಹೊದಲ ಅವರು ಅರೆಬರೆಯಾಗಿ ಕೆಲಸ ಮಾಡುವ ಸಾಧ್ಯತೆಗಳಿಂದ ದೂರ ಇರುವ ಜಾಯಮಾನದವರು, ಆ ಕಾರಣಕ್ಕಾಗಿಯೇ ಪೂರ್ಣ ಪ್ರಮಾಣದಲ್ಲಿ ಸ್ವಯಂಸೇವೆಯ ಕ್ರಿಯಾಶೀಲತೆಯಿಂದ ದೂರವಿರುವ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಅಪಾರ ಕೊಡುಗೆಯನ್ನು ಗಮನಿಸಿ, ಅವರನ್ನು ಇತ್ತೀಚೆಗೆ ನಾವು ಆಡಳಿತಮಂಡಳಿಯಲ್ಲಿ ಸೇರಿಸಿಕೊಂಡಿದ್ದು, ಅವರನ್ನು ಇನ್ನೊಬ್ಬ ವಿಶ್ವಸ್ತರನ್ನಾಗಿ ಛಾಪಿಸುವ ನಮ್ಮ ಯೋಚನೆಗಳಿಗೆ ಈ ಮೂಲಕ ತಡೆಯಾಗಿದೆ.
ಯಕ್ಷವಾಹಿನಿಗೆ ಎಲ್ಲರ ಸಹಯೋಗ ಹಾಗೂ ಸಹಕಾರ ಬಯಸುವ ನಾವು ಮುಂದೆ ಅವರಿಂದ ಸಾಧ್ಯವಾಗಬಲ್ಲ ಎಲ್ಲಾ ಸಹಕಾರ, ಸಹಯೋಗಗಳಿಗೆ ಆಶಿಸುತ್ತೇವೆ. ಮುಂದೆ ಯಕ್ಷವಾಹಿನಿಯ ಆಧಾರ ಸ್ಥಂಭಗಳಲ್ಲೊಂದಾಗಿ ಅವರು ವಾಪಾಸಾಗುವ ಸಾಧ್ಯತೆಗಳೂ ಮೂಡಿ ಬರಲಿ ಎಂದು ಹಾರೈಸುತ್ತೇವೆ.
ಕಳೆದ ಆರು ತಿಂಗಳಲ್ಲಿ ವೃತ್ತಿ ಜೀವನದಲ್ಲಿ ಅಪೂರ್ವ ಯಶಸ್ಸನ್ನು ಕಾಣುತ್ತಾ ಅವಿಶ್ರಾಂತವಾಗಿ ಯಾವತ್ತೂ ದುಡಿಯುವ ಅಶ್ವಿನಿ ಹೊದಲ ಅವರಿಗೆ ವೈಯಕ್ತಿಕ ಬದುಕಿನಲ್ಲಿ ಯಶಸ್ಸು ಹಾಗೂ ಸಾರ್ಥಕ್ಯವನ್ನು ಹಾರೈಸುವುದಲ್ಲದೇ ಅವರ ಕುಟುಂಬದವರಿಗೂ ಶುಭ ಹಾರೈಸುತ್ತಿದ್ದೇವೆ.
ಅಶ್ವಿನಿ ಹೊದಲ ಅವರ ನಿರ್ಗಮನವು ಅವರನ್ನು ನಂಬಿಕೊಂಡು ಬಂದಿರುವ ಯೋಜನೆಗಳಿಗೆ ತಾತ್ಕಾಲಿಕ ಹಿನ್ನಡೆ ಕೊಟ್ಟರೂ, ಅವರ ಸ್ಥಾನ ತುಂಬಿಸುವತ್ತ ಅನೇಕ ಹೊಸ ಹಾಗೂ ಹಾಲಿ ಸ್ವಯಂಸೇವಕರು ನಮ್ಮ ಕೈಜೋಡಿಸಲಿ ಎಂದು ಹಾರೈಸುತ್ತೇವೆ. ಪ್ರಸಂಗಪ್ರತಿಸಂಗ್ರಹದ ಸಂಚಾಲಕತ್ವದ ಭಾರವನ್ನು ವಹಿಸಿಕೊಳ್ಳಲು ಲ. ನಾ. ಭಟ್ ಮುಂದೆ ಬಂದಿದ್ದಾರೆ. ಯಕ್ಷಮಟ್ಟುಕೋಶ ಯೋಜನೆಯಲ್ಲಿ ಅವರಿಲ್ಲದ ನಷ್ಟವನ್ನು ಭರಿಸುವ ಜವಾಬ್ದಾರಿ ಸಂಚಾಲಕರಾದ ಅಜಿತ ಕಾರಂತರದ್ದಾದರೆ, ಯಕ್ಷಪ್ರಸಂಗಕೋಶ ಯೋಜನೆಯಲ್ಲಿ ರವಿ ಮಡೋಡಿಯವರದ್ದೂ, ಯಕ್ಷಪ್ರಸಂಗಪಟ್ಟಿ ಯೋಜನೆಯಲ್ಲಿ ನಟರಾಜ ಉಪಾಧ್ಯರದ್ದೂ ಆಗಿರುತ್ತದೆ.
ಯಕ್ಷಗಾನವೇ ವಿಶ್ವಕಲೆಯಾಗಿ ಒಂದು ವಾಹಿನಿಯಾದರೆ, ಅದರಲ್ಲಿ ಅಳಿಲು ಸೇವೆಯಾಗಿ ತೊಡಗಿಕೊಂಡಿರುವ ಯಕ್ಷವಾಹಿನಿಯೂ ಒಂದು ನದಿಯೇ. ಇದರ ಹರಿವಿನಲ್ಲಿ ಸ್ವಯಂಸೇವಕರ ಕೊಡುಗೆಗಳು ವಾಹಿನಿಯಾಗಿ ಬರುತ್ತದೆ, ಹೋಗುತ್ತದೆ. ಅಶ್ವಿನಿ ಹೊದಲರನ್ನು ಮೀರಿಸುವ ಸ್ವಯಂಸೇವಕರು ಮುಂದೆ ಮೂಡಿಬರುವತ್ತ ನಮ್ಮ ವಿಶ್ವಾಸವಿಲ್ಲದಿದ್ದರೂ, ಹಾಗೆಯೇ ಆಗಲಿ ಎಂದು ನಾವು ವಿಧಿಯನ್ನು ಪ್ರಾರ್ಥಿಸುತ್ತ, ಅಂತಹ ಅನುಗ್ರಹಗಳ ಮೂಲಕವೇ ಯಕ್ಷವಾಹಿನಿಯು ಒಂದು ಮಿತಿಯಲ್ಲಿದ್ದರೂ ತನ್ನ ಪ್ರಾಮಾಣಿಕ ಪ್ರಯತ್ನಗಳನ್ನು ಎಂದಿನಂತೆ ಮುಂದುವರೆಸುವದಲ್ಲದೇ ಇನ್ನೂ ಹೆಚ್ಚಿಸುತ್ತಾ ಹೋಗಲಿ ಎಂದು ಬೇಡಿಕೊಳ್ಳುತ್ತೇವೆ.
ಮತ್ತೊಮ್ಮೆ ಶ್ರೀಮತಿ ಅಶ್ವಿನಿ ಹೊದಲ ಅವರಿಗೆ ಕೃತಜ್ಣತೆಗಳನ್ನು ತಿಳಿಸುವ ಹಾಗೂ ಅವರಿಗೆ ಶುಭ ಹಾರೈಸುವ,
ಆಡಳಿತ ಮಂಡಳಿ ಸದಸ್ಯರೆಲ್ಲರು,
ಯಕ್ಷವಾಹಿನಿ, ಬೆಂಗಳೂರು