Sunday, 20 March 2022

ಆಮಂತ್ರಣ: ಯಕ್ಷಕವಿ ನಮನ - 06: ದಿ. ಶ್ರೀ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ - 20 ಮಾರ್ಚ್ 2022 ಭಾನುವಾರ ಸಂಜೆ 06 ಗಂಟೆಗೆ


 ಆಮಂತ್ರಣ:

 

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ

ಆನ್ಲೈನ್ ಸರಣಿಕಾರ್ಯಕ್ರಮ ಯಕ್ಷಕವಿ ನಮನ

ನಡುಗನ್ನಡದ ನಡೆಯನ್ನುಳಿಸಿಕೊಂಡೇ ಯಕ್ಷಕಾವ್ಯಲೋಕವನ್ನು ಕಟ್ಟಿದ, ಮುನ್ನಡೆಸುತ್ತಿರುವ ಕನ್ನಡದ ನಿಜಕವಿಗಳನ್ನು ಗೌರವಿಸುವ ಸರಣಿ (ಪರಿಕಲ್ಪನೆ: ಶ್ರೀಧರ ಡಿ. ಎಸ್.)

 

ಯಕ್ಷಕವಿ ನಮನ - 06:  ದಿ. ಶ್ರೀ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ

 

20 ಮಾರ್ಚ್ 2022 ಭಾನುವಾರ ಸಂಜೆ 06 ಗಂಟೆಗೆ

 

ಅಂದು ನಮ್ಮೊಂದಿಗೆ:

 

ಉಪನ್ಯಾಸಕಾರ: ಪ್ರೊ. ಪವನ್ಕಿರಣಕೆರೆ; ಯಕ್ಷಕವಿ, ಅರ್ಥದಾರಿ

ಮುಖ್ಯ ಅತಿಥಿ: ಶ್ರೀ ರಮೇಶ್ಬೇಗಾರು; ಸಾಂಸ್ಕೃತಿಕ ಸಂಘಟಕ, ನಿರ್ದೇಶಕ

ಕವಿಯ ಕೆಲವು ಪದ್ಯಗಳ ಹಾಡುಗಾರಿಕೆ: ಶ್ರೀ ಬಾಲಕೃಷ್ಣ ಹಿಲ್ಲೋಡಿ 

ಸಮನ್ವಯಕಾರ: ವೇದಮೂರ್ತಿ ಅಜಿತ್ ಕಾರಂತ; ಯಕ್ಷಗಾನ ಕಲಾವಿದ, ಅರ್ಥದಾರಿ

 

ಜ್ಹೂಮ್ವೇದಿಕೆಯ ಕೊಂಡಿ: https://us02web.zoom.us/j/85715442987

ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana

Sunday, 20 February 2022

ಯಕ್ಷಪುಸ್ತಕಕೋಶದಲ್ಲಿ ಡಾ. ಆನಂದರಾಮ ಉಪಾಧ್ಯರ ಹೊಸ ಪುಸ್ತಕ, "ಸಮಾಹಿತ" ದ ವಿದ್ಯುನ್ಮಾನ ಪ್ರತಿಯ ಲೋಕಾರ್ಪಣೆ

 



ಯಕ್ಷವಾಹಿನಿ ಸಂಸ್ಥೆಯ ಸ್ಥಾಪಕ ವಿಶ್ವಸ್ಥರು ಹಾಗೂ ಮೊದಲ ಕಾರ್ಯಾಧ್ಯಕ್ಷರು ಆಗಿರುವ ಡಾ. ಆನಂದರಾಮ ಉಪಾಧ್ಯರು, ಪುಸ್ತಕದ ಲೋಕಾರ್ಪಣೆಯ ಜೊತೆಜೊತೆಗೇ ಈ ಅಂತರಜಾಲದ ಪ್ರತಿಯನ್ನೂ ಲೋಕಾರ್ಪಣೆಗೊಳ್ಳಿಸಿ, ವಿದ್ಯುನ್ಮಾನ ಪ್ರತಿಯ ಉಚಿತ ಹಂಚುವಿಕೆಯ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.

ಯಕ್ಷವಾಹಿನಿಯ ಸಹಯೋಗದ ಮೂಲಕ ಲೋಕಾರ್ಪಣಗೋಳ್ಳುತ್ತಿರುವ “ಸಮಾಹಿತ” ಪುಸ್ತಕದ ವಿದ್ಯುನ್ಮಾನ ಪ್ರತಿ ನ್ನು ಓದಲು ಮತ್ತು ಕೆಳಗಿಳಿಸಿಕೊಳ್ಳಲು ಈ ಕೆಳಗಿನ ಕೊಂಡಿಯನ್ನು ಒತ್ತಿ:


https://drive.google.com/file/d/1OPC0OF1JF94NYusdrtKlZOJqOeAd_y3Z/view?usp=sharing

 

ಪ್ರಸಂಗೇತರ ಇತರ ಯಕ್ಷಗಾನ ಪುಸ್ತಕಗಳ ಉಚಿತ ಪ್ರಸಾರಕ್ಕಾಗಿಯೇ “ಯಕ್ಷಪುಸ್ತಕಕೋಶ” ಎಂಬ ಹೊಸ ಯೋಜನೆಯು ಈಗಾಗಲೇ ಜಾರಿಯಲ್ಲಿದೆ.  ಇಂದಿನ ಪುಸ್ತಕವು ೬೦ನೇ ಪುಸ್ತಕವಾಗಿ ಸೇರ್ಪಡೆಯಾಗುತ್ತಿದೆ.

ಯಕ್ಷಪುಸ್ತಕಕೋಶದ ಕೋಷ್ಟಕಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ:


https://drive.google.com/file/d/1xKHXsUslzMR5tRYyTRp7hbyFFXX9zV79/view?usp=sharing


ಯಕ್ಷವಾಹಿನಿಯ ಕಾರ್ಯಾಧ್ಯಕ್ಷ ಪದವಿಯನ್ನು ಯುವ ನಾಯಕರಾದ ರವಿ ಮಡೋಡಿ ಅವರ ಹೆಗಲಿಗೇರಿಸಿ, ಸಂಸ್ಥೆಯ ಏಳಿಗೆಯ ರಾಯಭಾರಿಯಾಗಿ ದುಡಿಯಲು ಹೊರಟಿರುವ ಡಾ. ಆನಂದರಾಮ ಉಪಾಧ್ಯರು ತನ್ನ ಇತಿಮಿತಿಗಳ ನಡುವೆ ಈ ರೀತಿಯ ಅಭೂತಪೂರ್ವ ಚೇತನವನ್ನು ಹುಟ್ಟಿಸುವ ಪ್ರಯತ್ನಗಳ ಮೂಲಕ ಯಕ್ಷವಾಹಿನಿಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಬುದ್ಧ ಸಂಸ್ಥೆ ಹಾಗೂ ಸಮೂಹವಾಗಿ ಬೆಳೆಯುವತ್ತ ತಮ್ಮ ನಾಯಕತ್ವದ ಒಂದು ಝಲಕ್ ಅನ್ನು ಪದೇ ಪದೇ ತೋರಿಸಿ ನಮ್ಮೆಲ್ಲರನ್ನೂ ಮೆಚ್ಚಿಸಿದ್ದಾರೆ.


ಈ ಶುಭ ಸಂದರ್ಭದಲ್ಲಿ ನಾವು ಪ್ರಾರ್ಥಿಸುವದಿಷ್ಟೇ: ಡಾ. ಆನಂದರಾಮ ಉಪಾಧ್ಯರಿಟ್ಟ ಹೆಜ್ಜೆಯ ದಾರಿಯಲ್ಲಿಯೇ, ಎಲ್ಲಾ ಕನ್ನಡದ ಹಾಗೂ ಯಕ್ಷಗಾನದ ಲೇಖರುಗಳು ಹಾಗೂ ಪ್ರಕಾಶಕರುಗಳು ಅಂತರಜಾಲದ ಪ್ರತಿಗಳನ್ನು ಕೂಡಾ ಸಮಾನಾಂತರವಾಗಿ ಬಿಡುಗೊಡೆಗೊಳಿಸುವ ಉದ್ಯಮಶೀಲತೆಗೆ ಬದ್ಧರಾಗಲಿ. ಹಣಕಾಸಿನ ಮಿತಿಯನ್ನು ಮೀರಿ, ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯ ಮೂಲ ಕಾರಣಗಳಿಗಾಗಿ  ಪುಸ್ತಕಗಳನ್ನು ಬರೆಯುವ /  ಪ್ರಕಾಶಿಸುವ ಎಲ್ಲಾ ಲೇಖಕರು / ಪ್ರಕಾಶಕರುಗಳು ಉಚಿತ ಪ್ರಸಾರಕ್ಕಾಗಿ ಅಂತರಜಾಲ ಪ್ರತಿಗಳನ್ನು ಕೊಡ ಮಾಡುತ್ತಾ ಹೋಗಲಿ, ಅಂತಹ ಪ್ರತಿಗಳ ದಾಖಲಾತಿ ಹಾಗೂ ಉಚಿತ ಪ್ರಸಾರದ ಸುತ್ತ ನಮ್ಮ ಸಂಸ್ಥೆ / ಸಮೂಹವು ಸದಾ ಮುಡಿಪಾಗಿದೆ. ಈ ಮುಡಿಪಿನ ಸುತ್ತ ಹೆಚ್ಚಿನ ಸಾಧನೆಯ ಸಾಕಾರಕ್ಕಾಗಿ ಇನ್ನೂ ಹೆಚ್ಚಿನ ಸ್ವಯಂಸೇವಕರ ಸಹಾಯ ಸಹಕಾರಗಳನ್ನು ಈ ಮೂಲಕ ಕೋರುತ್ತಿದ್ದೇವೆ.  ಸ್ವಯಂಸೇವೆಯ ಸಾಧ್ಯತೆ ಇಲ್ಲದವರು ನಮ್ಮ ಸಂಸ್ಥ ಹಾಗೂ ಯೋಜನೆಗಳನ್ನು ಬಲ ಪಡಿಸುವುತ್ತ ಹಣಕಾಸಿನ ಸಹಾಯ ಮಾಡುವಿದ್ದರೆ ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿ ಹಣಕಾಸಿನ ಸಂಪನ್ಮೂಲದ ಬಲದಲ್ಲಿ ಹೆಚ್ಚಿನ ಕ್ರಿಯಾಶೀಲತೆಯತ್ತ ತೊಡಗಿಕೊಳ್ಳಲು ಸಿದ್ಧರಿದ್ದೇವೆ.

ಈ ಸಂದರ್ಭದಲ್ಲಿ ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಪ್ರಸಂಗಕೋಶ ಯೋಜನೆಗಳ ಸುತ್ತ ಯಕ್ಷಗಾನ ಪ್ರಸಂಗ ಪುಸ್ತಕಗಳ ಅಂತರಜಾಲ ಪ್ರತಿಗಳನ್ನು ಹುಟ್ಟಿಸಲು ಉದಾರತೆಯಿಂದ ಅನುಮತಿ ಕೊಟ್ಟ ನೂರಾರು ಪ್ರಸಂಗಕವಿಗಳಿಗೆ ಹಾಗೂ ಸಂಬಂಧಿತ ಪ್ರಕಾಶಕರಿಗೆ ನಮ್ಮ ನಮನಗಳು. ಇವರೆಲ್ಲರ ಈವರೆಗಿನ ಉದಾರತೆಯೇ ಡಾ. ಆನಂದರಾಮ ಉಪಾಧ್ಯರ ಪ್ರಸಂಗೇತರ ಪುಸ್ತಕಕ್ಕೂ ಈ ರೀತಿಯ ಅನುಮತಿ ಕೊಡುವತ್ತ ಮಾರ್ಗದರ್ಶಕವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು!

ಈ ಅಪೂರ್ವ ಸಂದರ್ಭದಲ್ಲಿ ಡಾ. ಆನಂದರಾಮ ಉಪಾಧ್ಯರು ಹಾಗೂ ಅವರ ಕುಟುಂಬದವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಹಾಗೂ ಯಶಸ್ಸನ್ನು ಕೋರುವ,


ಯಕ್ಷವಾಹಿನಿ ಆಡಳಿತ ಮಂಡಳಿ

ಯಕ್ಷಪುಸ್ತಕಕೋಶ ಯೋಜನಾ ಮಂಡಳಿ






Saturday, 5 February 2022

”ಯಕ್ಷಗಾನ ಮತ್ತು ಯಕ್ಷಗಾನ ಅಕಾಡೆಮಿ” - ಡಾ. ಜಿ. ಎಲ್.‌ ಹೆಗಡೆ ಅವರೊಂದಿಗೆ ಚಿಂತನ ಮಂಥನ - 05 ಫೆಬ್ರವರಿ 2022 ಶನಿವಾರ ಸಂಜೆ 06 ಗಂಟೆಗೆ

 


ಆಮಂತ್ರಣ:
ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ
ಚಿಂತನ-ಮಂಥನದ ಆನ್ಲೈನ್ ಸಂವಾದ‌ ಕಾರ್ಯಕ್ರಮ
”ಯಕ್ಷಗಾನ ಮತ್ತು ಯಕ್ಷಗಾನ ಅಕಾಡೆಮಿ”
05 ಫೆಬ್ರವರಿ 2022 ಶನಿವಾರ ಸಂಜೆ 06 ಗಂಟೆಗೆ
ಅಂದು ನಮ್ಮೊಂದಿಗೆ
ಡಾ. ಜಿ. ಎಲ್.‌ ಹೆಗಡೆ
ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರು
ಶ್ರೀ ಎಂ. ಎಲ್.‌ ಸಾಮಗ
ಅಕಾಡೆಮಿಯ ಮಾಜಿ ಅಧ್ಯಕ್ಷರು
ಸ್ವಾಗತ ಮತ್ತು ಪ್ರಸ್ತಾವನೆ
ಡಾ. ಆನಂದರಾಮ ಉಪಾಧ್ಯ
ಲೇಖಕ, ಯಕ್ಷಗಾನ ವಿದ್ವಾಂಸ
ಸಮನ್ವಯ
ಜ್ಹೂಮ್‌ ವೇದಿಕೆಯ ಕೊಂಡಿ:
ಫೇಸ್ಬುಕ್‌ನಲ್ಲಿ ನೇರ ಪ್ರಸಾರ:


Thursday, 20 January 2022

23 ಜನವರಿ 2023 ಭಾನುವಾರ ಸಂಜೆ 06 ಗಂಟೆಗೆ: ಯಕ್ಷಕವಿ ನಮನ - 04: ಶ್ರೀ ಕಂದಾವರ ರಘುರಾಮ ಶೆಟ್ಟಿ

 


ಆಮಂತ್ರಣ:

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ

ಆನ್ಲೈನ್ ಸರಣಿಕಾರ್ಯಕ್ರಮ ಯಕ್ಷಕವಿ ನಮನ
ನಡುಗನ್ನಡದ ನಡೆಯನ್ನುಳಿಸಿಕೊಂಡೇ ಯಕ್ಷಕಾವ್ಯಲೋಕವನ್ನು ಕಟ್ಟಿದ, ಮುನ್ನಡೆಸುತ್ತಿರುವ ಕನ್ನಡದ ನಿಜಕವಿಗಳನ್ನು ಗೌರವಿಸುವ ಸರಣಿ (ಪರಿಕಲ್ಪನೆ: ಶ್ರೀಧರ ಡಿ. ಎಸ್.)

ಯಕ್ಷಕವಿ ನಮನ - 04:  ಶ್ರೀ ಕಂದಾವರ ರಘುರಾಮ ಶೆಟ್ಟಿ*; ಯಕ್ಷ ಕವಿ, ಶಿಕ್ಷಕ, ಅರ್ಥದಾರಿ

*‌ ಅಂದು ಅವರ ಆನ್ಲೈನ್ಉಪಸ್ಥಿತಿಯನ್ನು ನಿರೀಕ್ಷಿಸಿ.

 

23 ಜನವರಿ 2023 ಭಾನುವಾರ ಸಂಜೆ 06 ಗಂಟೆಗೆ

ಅಂದು ನಮ್ಮೊಂದಿಗೆ

ಉಪನ್ಯಾಸಕಾರರು: ಶ್ರೀ ಇಟಗಿ ಮಹಾಬಲೇಶ್ವರ ಭಟ್ಟ; ಯಕ್ಷಕವಿ, ಯಕ್ಷಗಾನ ಕಲಾವಿದ, ಸಂಘಟಕ

ಸಮನ್ವಯಕಾರರು: ವೇದಮೂರ್ತಿ ಅಜಿತ್ ಕಾರಂತ; ಯಕ್ಷಗಾನ ಕಲಾವಿದ, ಅರ್ಥದಾರಿ

 

ಜ್ಹೂಮ್ವೇದಿಕೆಯ ಕೊಂಡಿ:  https://us02web.zoom.us/j/82274462169

ಫೇಸ್ಬುಕ್ನಲ್ಲಿ ನೇರ ಪ್ರಸಾರ: https://www.facebook.com/yakshavahiniprathistana