Wednesday, 12 January 2022

ನೇರ ಪ್ರಸಾರ: 12/01/2022 ಬುಧವಾರ ಸಂಜೆ ಏಳು ಗಂಟೆಗೆ - ನಾಟ್ಯಶ್ರೀ ಕಲಾತಂಡ (ರಿ) ಶಿವಮೊಗ್ಗ- ಪ್ರಸಂಗ - ಅಕ್ಕಮಹಾದೇವಿ

 



ಫಾಟಕ್‌ ಯಕ್ಷ ಸಂಸ್ಕೃತಿ ಟ್ರಸ್ಟ್‌, ಬೆಂಗಳೂರು ಇವರು ಯಕ್ಷವಾಹಿನಿಯ ಸಹಯೋಗಿಯಾಗಿ ಯಕ್ಷವಾಹಿನಿಯ ಜ್ಹೂಮ್‌ ವೇದಿಕೆಯ ಮೂಲಕ  ಮಲೆನಾಡಿನ ಮೂಲೆಯ  ಕಾರ್ಯಕ್ರಮವೊಂದರ ನೇರ ಪ್ರಸಾರದ ಪ್ರಯತ್ನದಲ್ಲಿದ್ದಾರೆ. ಸ್ಥಳೀಯ ತಾಂತ್ರಿಕ ನಿರ್ವಹಣೆಯ ಆಧಾರದ ಮೇಲೆ ಈ ನೇರ ಪ್ರಸಾರದ ಗುಣಮಟ್ಟವಿರುತ್ತದೆ. ಪ್ರಾರಂಭಿಕ ಪ್ರಯತ್ನವಿರುವುದರಿಂದ ಪ್ರಸಾರದಲ್ಲಿ ಗುಣಮಟ್ಟದ ಸವಾಲುಗಳು ಎದುರಾಗಬಹುದು. 

ಕಾರ್ಯಕ್ರಮವನ್ನು ಯಕ್ಷವಾಹಿನಿಯ ಫೇಸ್ಬುಕ್‌ ಅಕೌಂಟಿನ ಮೂಲಕ ನೇರ ಪ್ರಸಾರ ಮಾಡಲಾಗುವುದು. 

12/01/2022 ಬುಧವಾರದ ಪ್ರಸಂಗ - ಅಕ್ಕಮಹಾದೇವಿ 

ಕವಿ-ಹೊಸ್ತೋಟ ಮಂಜುನಾಥ ಭಾಗವತ. 

ಸಮಯ ಸಂಜೆ 7 ಗಂಟೆಗೆ.

ನಾಟ್ಯಶ್ರೀ ಕಲಾತಂಡ (ರಿ) ಶಿವಮೊಗ್ಗ.

ಸ್ಥಳ - ಚಿಕ್ಕಮಗಳೂರು.

ಕೊಳಗಿ, ಫಾಟಕ್, ಭಾರ್ಗವ, ಹಣಜೀಬೈಲು, ವಿ. ದತ್ತಮೂರ್ತಿ ಭಟ್. ಸಿದ್ದಾಪುರ ಅಶೋಕ್, ಚಪ್ಪರಮನೆ ಹಾಸ್ಯಗಾರ, ನಾಗೇಂದ್ರ ಮೂರೂರು, ಇಟಗಿ, ಪ್ರಣವ ಭಟ್, ಸದಾಶಿವ ಭಟ್, ಮಹಾಬಲೇಶ್ವರ ಗೌಡ, ಅವಿನಾಶ ಕೊಪ್ಪ.

ಯಕ್ಷವಾಹಿನಿ ಫೇಸ್ಬುಕ್‌ ಪುಟದಲ್ಲಿ ನೇರ ಪ್ರಸಾರಕ್ಕೆ ಕೊಂಡಿ:

https://www.facebook.com/yakshavahiniprathistana/


Tuesday, 11 January 2022

ಜನವರಿ 11, 2022: ದಕ್ಷಯಜ್ಞ: ಯಕ್ಷವಾಹಿನಿಯ ಜ್ಹೂಮ್‌ ವೇದಿಕೆಯ ಮೂಲಕ ಇಂದಿನ ಯಕ್ಷ ಭಾವೈಕ್ಯ ಪ್ರದರ್ಶನ ಯಾತ್ರೆಯ ನೇರ ಪ್ರಸಾರದ ಪ್ರಯತ್ನ

 




ಫಾಟಕ್‌ ಯಕ್ಷ ಸಂಸ್ಕೃತಿ ಟ್ರಸ್ಟ್‌, ಬೆಂಗಳೂರು ಇವರು ಯಕ್ಷವಾಹಿನಿಯ ಸಹಯೋಗಿಯಾಗಿ ಯಕ್ಷವಾಹಿನಿಯ ಜ್ಹೂಮ್‌ ವೇದಿಕೆಯ ಮೂಲಕ  ಮಲೆನಾಡಿನ ಮೂಲೆಯ  ಕಾರ್ಯಕ್ರಮವೊಂದರ ನೇರ ಪ್ರಸಾರದ ಪ್ರಯತ್ನದಲ್ಲಿದ್ದಾರೆ. ಸ್ಥಳೀಯ ತಾಂತ್ರಿಕ ನಿರ್ವಹಣೆಯ ಆಧಾರದ ಮೇಲೆ ಈ ನೇರ ಪ್ರಸಾರದ ಗುಣಮಟ್ಟವಿರುತ್ತದೆ. ಪ್ರಾರಂಭಿಕ ಪ್ರಯತ್ನವಿರುವುದರಿಂದ ಪ್ರಸಾರದಲ್ಲಿ ಸವಾಲುಗಳು ಎದುರಾಗಬಹುದು. ಕಾರ್ಯಕ್ರಮವನ್ನು ಜ್ಹೂಮ್‌ ವೇದಿಕೆಯಲ್ಲಿ ಅಲ್ಲದೇ ಯಕ್ಷವಾಹಿನಿಯ ಫೇಸ್ಬುಕ್‌ ಅಕೌಂಟಿನ ಮೂಲಕ ನೇರ ಪ್ರಸಾರ ಮಾಡುವ ಇರಾದೆ. ಕೊಂಡಿಗಳನ್ನು ಕೆಳಗೆ ಕೊಡಲಾಗಿದೆ.

ಯಕ್ಷವಾಹಿನಿಗೆ ಮೀಸಲಾದ ಈ ಜ್ಹೂಮ್‌ ನೇರ ಪ್ರಸಾರದ ಸಂಪನ್ಮೂಲವನ್ನು ಫಾಟಕ್‌ ಯಕ್ಷ ಸಂಸ್ಕೃತಿ ಟ್ರಸ್ಟ್‌ ಮೂಲಕ ಪ್ರಾಯೋಗಿಕವಾಗಿ ಇತರ ಸಂಸ್ಥೆಗಳಿಗೂ ಉಪಯುಕ್ತವಾಗುವಂತೆ ಇದೊಂದು ಪ್ರಾರಂಭಿಕವಾದ ಪ್ರಾಯೋಗಿಕ ಪ್ರಯತ್ನ ಅಷ್ಟೇ. ಇದು ಕಿಂಚಿತ್ತಾಗಿಯಾದರೂ ಯಶಸ್ಸಾದರೆ, ಈ ಹಾದಿಯಲ್ಲಿ ಇನ್ನೂ ಅನೇಕ ಸ್ವಯಂಸೇವಕರು / ಸಂಸ್ಥೆಗಳು ಮುಂದೆ ಬಂದು, ಹೆಚ್ಚು ಖರ್ಚಿಲ್ಲದೇ, ಮೂಲೆಮೂಲೆಗಳ ಯಕ್ಷಗಾನೋತ್ಸವಗಳು ಅಂತರಜಾಲದಲ್ಲಿ ನೇರ ಪ್ರಸಾರವಾಗುವಂತೆ ಉಪಕರಿಸುವ ಸಾಧ್ಯತೆ ಬಗ್ಗೆ ಬೊಟ್ಟು ಮಾಡಿ ತೋರಿಸುವ ಅಳಿಲು ಸೇವೆ ಮಾತ್ರ ಯಕ್ಷವಾಹಿನಿಯದ್ದು.


ಇಂದಿನ ಪ್ರಸಂಗ: ದಕ್ಷಯಜ್ಞ


ಸುಮಾರು ಸಂಜೆ ೬ ಘಂಟೆಗೆ ಪ್ರಾರಂಭ


ಹೆಚ್ಚಿನ ವಿವರಗಳಿಗೆ ಮೇಲಿನ ಚಿತ್ರಗಳನ್ನು ಗಮನಿಸಿ.


ಜ್ಹೂಮ್‌ ವೇದಿಕೆಯ ಕೊಂಡಿ:

https://us02web.zoom.us/j/83297248057


ಯಕ್ಷವಾಹಿನಿ ಫೇಸ್ಬುಕ್‌ ಪುಟದಲ್ಲಿ ನೇರ ಪ್ರಸಾರಕ್ಕೆ ಕೊಂಡಿ:

https://www.facebook.com/yakshavahiniprathistana/


ಯಕ್ಷಗಾನಂ ಗೆಲ್ಗೆ!



  

Sunday, 28 November 2021

ಆಮಂತ್ರಣ: ಯಕ್ಷಕವಿ ನಮನ-02: ದಿ. ಕೀರಿಕ್ಕಾಡು ಮಾಸ್ತರ್‌ ವಿಷ್ಣು ಭಟ್ಟ - ಭಾನುವಾರ 28-11-2021 ಸಂಜೆ 6.00ರಿಂದ



ಆಮಂತ್ರಣ:

ಯಕ್ಷವಾಹಿನಿ (ರಿ) ಬೆಂಗಳೂರು ಅರ್ಪಿಸುವ

ಯಕ್ಷಕವಿ ನಮನ -  ನಡುಗನ್ನಡದ ನಡೆಯನ್ನುಳಿಸಿಕೊಂಡೇ ಯಕ್ಷಕಾವ್ಯಲೋಕವನ್ನು ಕಟ್ಟಿದ, ಮುನ್ನಡೆಯುತ್ತಿರುವ ಕನ್ನಡದ ನಿಜಕವಿಗಳನ್ನು ಗೌರವಿಸುವ ಸರಣಿ; (ಪರಿಕಲ್ಪನೆ: ಶ್ರೀಧರ ಡಿ. ಎಸ್.)

ಯಕ್ಷಕವಿ ನಮನ-02: ದಿ. ಕೀರಿಕ್ಕಾಡು ಮಾಸ್ತರ್ವಿಷ್ಣು ಭಟ್ಟ

ಉಪನ್ಯಾಸಕರು: ಶ್ರೀ ಗಣರಾಜ ಕುಂಬ್ಳೆ; ಉಪನ್ಯಾಸಕ, ಕವಿ, ಲೇಖಕ, ಅರ್ಥದಾರಿ ಹಾಗೂ ವೇಷಧಾರಿ

ಅತಿಥಿ: ಡಾ. ಕೆ. ರಮಾನಂದ ಬನಾರಿ; ವೈದ್ಯ, ಸಾಹಿತಿ, ಅರ್ಥದಾರಿ

ಸಮನ್ವಯಕಾರರು: ಡಾ. ಆನಂದರಾಮ ಉಪಾಧ್ಯ, ಕನ್ನಡ ಲೇಖಕ, ಯಕ್ಷಗಾನ ವಿದ್ವಾಂಸ

ದಿನಾಂಕ: ಭಾನುವಾರ 28-11-2021 ಸಂಜೆ 6.00ರಿಂದ

ಜ್ಹೂಮ್ವೇದಿಕೆಯ ಕೊಂಡಿ:    https://us02web.zoom.us/j/84056326722

ಫೇಸ್ಬುಕ್ನಲ್ಲಿ ನೇರ ಪ್ರಸಾರ:  https://www.facebook.com/yakshavahiniprathistana


 

Saturday, 6 November 2021

ಶನಿವಾರ 06-11-2021 ಸಂಜೆ 6.00 : ಯಕ್ಷಶೋಧಸಾರ-07: “ಯಕ್ಷಪ್ರಸಂಗಕೋಶ ಯೋಜನೆಯ ಹಾದಿಯಲ್ಲಿ ಕಂಡ ಸವಾಲುಗಳು ಮತ್ತು ಸಾಧ್ಯತೆಗಳು”


 ಆಮಂತ್ರಣ:


ಯಕ್ಷವಾಹಿನಿ (ರಿ) ಬೆಂಗಳೂರು ಇವರು ಯಕ್ಷದೀವಿಗೆ (ರಿ) ತುಮಕೂರು ಇವರ ಸಹಯೋಗದಲ್ಲಿ ಅರ್ಪಿಸುವ

ಯಕ್ಷಶೋಧಸಾರ (ಯಕ್ಷಗಾನ ಸಂಶೋಧನೆಯ ಸಿಂಹಾವಲೋಕನಾ ಸರಣಿ)


ಯಕ್ಷಶೋಧಸಾರ-07: “ಯಕ್ಷಪ್ರಸಂಗಕೋಶ ಯೋಜನೆಯ ಹಾದಿಯಲ್ಲಿ ಕಂಡ ಸವಾಲುಗಳು ಮತ್ತು ಸಾಧ್ಯತೆಗಳು”


ಉಪನ್ಯಾಸಕರು: ಶ್ರೀ ಗಿಂಡೀಮನೆ ಮೃತ್ಯುಂಜಯ

ಯಕ್ಷಕವಿ, ನಿವೃತ್ತ ಇಂಜಿನಿಯರ್‌, ಯಕ್ಷಪ್ರಸಂಗಕೋಶ ಹಾಗೂ ಯಕ್ಷಮಟ್ಟುಕೋಶ ಯೋಜನೆಗಳ ಸಹನಿರ್ದೇಶಕರು


ಸಮನ್ವಯಕಾರರು: ಶ್ರೀ ರವಿ ಮಡೋಡಿ

ಯಕ್ಷಗಾನ ಕಲಾವಿದ, ಲೇಖಕ, ತಂತ್ರಾಂಶತಜ್ಞ, ಯಕ್ಷಪ್ರಸಂಗಕೋಶ ಯೋಜನೆಯ ಸಂಚಾಲಕ


ನಿರ್ವಹಣೆ: ಶ್ರೀ ನಟರಾಜ ಉಪಾಧ್ಯ, ಯಕ್ಷವಾಹಿನಿ


ದಿನಾಂಕ ಶನಿವಾರ 06-11-2021 ಸಂಜೆ 6.00ರಿಂದ  7.30ರ ತನಕ


ಜ್ಹೂಮ್‌ ವೇದಿಕೆಯ ಕೊಂಡಿ:   https://us02web.zoom.us/j/88442062731

ಫೇಸ್ಬುಕ್‌ ನಿಂದ ನೇರ ಪ್ರಸಾರ: https://www.facebook.com/yakshavahiniprathistana